ವೀರಶೈವ ಲಿಂಗಾಯತ ಒಂದೇ: ಕುಕನೂರ ಶ್ರೀ
ಕುಕನೂರ 17 : ವೀರಶೈವ ಲಿಂಗಾಯತರು ಬೇರೆ ಬೇರೆಯಲ್ಲ ಮುಂಬರುವ ಜಾತಿ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಧರ್ಮ ಎಂದು ಬರಿಸಬೇಕು ಎಂದು ಕುಕನೂರ ಪಟ್ಟಣದ ಅನ್ನದಾನೀಶ್ವರ ಶಾಖಾಮಠದ ಪೂಜ್ಯ ಮಹದೇವ ಸ್ವಾಮೀಜಿ ಹೇಳಿದರು.
ಅವರು ಕುಕನೂರ ಪಟ್ಟಣದ ಅನ್ನದಾನೀಶ್ಚರ ಮಠದಲ್ಲಿ ಮಾತನಾಡುತ್ತಾ ಈಗಾಗಲೇ ಮುಂಡರಗಿ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ಪೂಜ್ಯರು ಬಹಳ ಸ್ಪಷ್ಟವಾಗಿ ವೀರಶೈವ ಲಿಂಗಾಯತ ಧರ್ಮದ ಇತಿಹಾದ ತಿಳಿಸಿದ್ದಾರೆ ಅವರೋಂದಿಗೆ ಈ ನಾಡಿನ ಶಿರಹಟ್ಟಿ ಪೂಜ್ಯರು ಸೇರಿದಂತೆ ಹಲವಾರು ಪೂಜ್ಯರು ವೀರಶೈವ ಲಿಂಗಾಯತ ಒಂದೇ ಎಂಬ ಸಂದೇಶ ನೀಡಿದ್ದಾರೆ ಆದ್ದರಿಂದ ಸಮಾಜದ ಬಂಧುಗಳು ಯಾವುದಕ್ಕೂ ಕಿವಿ ಕೊಡದೆ ಸಮಾಜದ ಒಳತಿಗಾಗಿ ಹೊಂದಾಗಬೇಕು, ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ವೀರಶೈವ ಲಿಂಗಾಯತ ಮಹಾಸಭಾ ನಿಲುವಿಗೆ ನಾವೇಲ್ಲ ಬದ್ದರಾಗಬೇಕು, ವೀರಶೈವರು ಬೇರೆ ಲಿಂಗಾಯತರು ಬೇರೆ ಎಂದರೆ ಸಮಾಜ ಅಭಿವೃದ್ಧಿ ಹೊಂದಲು ಸಾದ್ಯವಿಲ್ಲ, ಬಸವಣ್ಣನವರು ರೇಣಕರು ಸಮಾಜದ ಎರಡು ಕಣ್ಣುಗಳು ಯಾವುದೇ ಕಣ್ಣಿಗೆ ನೋವಾದರು ಅದು ನಮ್ಮ ಸಮಾಜಕ್ಕೆ ಹಾನಿಯಾಗುತ್ತದೆ, ನಮ್ಮಲ್ಲಿರುವ ಸಣ್ಣ ಪುಟ್ಟ ಬಿನ್ನಾಬಿಪ್ರಾಯಗಳನ್ನ ಮರೆತು ನಾವೇಲ್ಲ ಹೊಂದಾಗಬೇಕು, ಸಮಾಜ ಒಡೆಯುವ ಕಾರ್ಯಕ್ಕೆ ಯಾರು ಮುಂದಾಗಬಾರದು ಈ ನಿಟ್ಟಿನಲ್ಲಿ ದಿನಾಂಕ 19 ರಂದು ನಡೆಯುವ ವೀರಶೈವ ಲಿಂಗಾಯತ ಏಕತಾ ಸಮಾವೇಶಕ್ಕೆ ಸಮಾಜದ ಬಂಧುಗಳು ಬರಬೇಕು ಮತ್ತು ವೀರಶೈವ ಲಿಂಗಾಯತ ಒಂದೇ ಎಂಬ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.