ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಪದಗ್ರಹಣ ಕಾರ್ಯಕ್ರಮ
ಕುಕನೂರು 10: ಹಾನಗಲ್ಲ ಶ್ರೀಕುಮಾರ ಶಿವಯೋಗಿ ಮಹಾ ಸ್ವಾಮೀಜಿಯವರು ಸ್ಥಾಪನೆ ಮಾಡಿದಂತ ಅಖಿಲ ವೀರಶೈವ ಮಹಾಸಭಾ ಧ್ಯೇಯೋದ್ದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಲು ಡಾ. ಮಹದೇವಯ್ಯ ಮಹಾಸ್ವಾಮಿಗಳು ತಿಳಿಸಿದರು. ಕೊಪ್ಪಳ ಜಿಲ್ಲಾ ಕುಕನೂರು ಪಟ್ಟಣದ ಅನ್ನದಾನೇಶ್ವರ ಶಾಖಾಮಠದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಪದಗ್ರಹಣ ಸನ್ಮಾನ ಮತ್ತು ಪ್ರೀತಿಯ ಭೋಜನ ಕಾರ್ಯಕ್ರಮದಲ್ಲಿ ಮಾತನಾಡಿದರು ಕಳಕನ ಗೌಡ ಪಾಟೀಲ್ ಅಧ್ಯಕ್ಷರು ವೀರಶೈವ ಲಿಂಗಾಯತ ಮಹಾಸಭಾ ಕೊಪ್ಪಳ ಮಾತನಾಡಿ ವೀರಶೈವ ಮಹಾಸಭಾ ಶಂಕರ್ ಬಿದರವರ ಮಾರ್ಗದರ್ಶನದಲ್ಲಿ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದು ಪ್ರತಿ ಜಿಲ್ಲಾ ಮತ್ತು ತಾಲೂಕು ಹಳ್ಳಿಗಳಲ್ಲಿ ಮಾಡಬೇಕು ಎಂಬುದನ್ನು ಮಾತನಾಡುವುದಿಲ್ಲ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.
ಅಂದಪ್ಪ ಜವಳಿ ಮತ್ತು ಬಸವನಗೌಡ ಮಾಲಿಪಾಟೀಲ್ ಮಾತನಾಡಿದರುವೀರಣ್ಣ ಅಣ್ಣಿಗೇರಿ ನಿರ್ದೇಶಕರು ವೀರಶೈವ ಮಹಾಮಂಡಳಿ ಕೊಪ್ಪಳ ಮಾತನಾಡಿ ಪ್ರತಿಯೊಬ್ಬ ವೀರಶೈವರು ಮಹಾಸಭಾ ಸದಸ್ಯರಾಗಬೇಕಾದರೆ 250ಗಳನ್ನು ನೀಡಿ ಸದಸ್ಯತ್ವ ಪಡೆಯಬಹುದು. ಜಿಲ್ಲಾ ಸದಸ್ಯತ್ವ ಪಡೆಯಬೇಕಾದರೆ ಸಾವಿರ ರೂಪಾಯಿಗಳು ರಾಜ್ಯ ಸಮಿತಿ ಸದಸ್ಯರಾಗಬೇಕಾದರೆ 2500 ರೂಪಾಯಿಗಳು ಅಖಿಲ ಭಾರತ ಮಹಾಸಭೆ ಸದಸ್ಯರಾಗಬೇಕಾದರೆ 5000 ಗಳನ್ನು ನೀಡಿ ಸದಸ್ಯತ್ವ ಪಡೆಯಬಹುದು ಎಂದು ಹೇಳಿದರು.
ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಮತ್ತು ಅಖಿಲ ಭಾರತ ವೀರಶೈವ ಗೌರವಧ್ಯಕ್ಷರನ್ನಾಗಿ ಡಾ. ಮಹದೇವ್ ಮಹಾಸ್ವಾಮಿಗಳು ಕಳಕನ ಗೌಡ ಪಾಟೀಲ್ ಅಧ್ಯಕ್ಷರು ವೀರಶೈವ ಲಿಂಗಾಯತ ಮಹಾಸಭಾ ಉಮೇಶ್ ಎತ್ತಿನಮನಿ ನಿರ್ದೇಶಕರು ವೀರಣ್ಣ ಅಣ್ಣಿಗೇರಿ ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕರು ಕೊಪ್ಪಳ ಎಂ ಎಸ್ ಹಿರೇಮಠ ನಿವೃತ್ತಿ ಉಪನ್ಯಾಸಕರು ನಿರ್ದೇಶಕರು ವೀರಶೈವ ಲಿಂಗಾಯತ ಮಂಡಳಿ ಬಸನಗೌಡ ಪಾಟೀಲ್ ನಿಯೋಜಿತ ಅಧ್ಯಕ್ಷರು ತಾಲೂಕು ವೀರಶೈವ ಮಂಡಳಿ ಕುಕನೂರು ಕವಿತಾ ಶಿರೋಳ ನಿರ್ದೇಶಕರು ವೀರಶೈವ ಮಹಾಸಭಾ ರಾಮನಗೌಡ ಆರ್ ಸಿ ಬಿ ಡಿ ತಾಲೂಕ್ ಪ್ರಧಾನ ಕಾರ್ಯದರ್ಶಿ ಕುಕುನೂರು ತಾಲೂಕು ಘಟಕ ಅಂದಪ್ಪ ಜವಳಿ ಬಸಪ್ಪ ದೇವರ ಉಪಾಧ್ಯಕ್ಷರು ಯಲ್ಲಪ್ಪ ಗೌಡ ಜಿಎಸ್ ಕರಮುಡಿ ಲಲಿತಾ ಸಿಳ್ಳಿನ ಆರ್ ಪಿ ರಾಜೂರ ಸಿಟಿ ಪಾಟೀಲ್ ಜೆಜೆ ಅಂಗಡಿ ನೀಲನಗೌಡ ತಳಕಲ್ ಈರಣ್ಣಗೌಡ ಪೊ.ಪಾಟೀಲ ತಳಕಲ್ ಶರಣಪ್ಪ ಕೊಪ್ಪದ ನಿಂಗಪ್ಪ ಶಿವರುದ್ರ್ಪ ಜೋಳದ ವಿಜಿ ಬಳಗೇರಿ ಗದಿಗೆಪ್ಪ ಪವಾಡ ಶೇಟರ್ ಇನ್ನು ಕೆಲವರು ವೀರಶೈವ ಲಿಂಗಾಯತ ಧರ್ಮದ ಸದಸ್ಯರು ಹಾಗೂ ಉಪಸ್ಥಿತರಿದ್ದರು.