ವೀರಕುಮಾರ್ ಪಾಟೀಲ ದಂಪತಿಗಳ ಹುಟ್ಟುಹಬ್ಬ: ವಿವಿಧ ಕಾರ್ಯಕ್ರಮ
ಕಾಗವಾಡ 09: ಮಾಜಿ ಇಂಧನ ಖಾತೆ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವೀರಕುಮಾರ್ ಪಾಟೀಲ್ ಹಾಗೂ ಅವರ ಧರ್ಮಪತ್ನಿ ಆಶಾರಾಣಿ ಪಾಟೀಲ್ ಇವರ ಹುಟ್ಟುಹಬ್ಬದ ನಿಮಿತ್ಯ, ಅವರ ಹುಟ್ಟೂರು ಕೊಗನೊಳಿ ಗ್ರಾಮದಲ್ಲಿ ಗುರುವಾರ ದಿ. 10ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕೊಗನೊಳಿ ಸ್ಪೋರ್ಟ್ಸ್ ಕ್ಲಬ್ ಇವರ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡಿದ್ದಾರೆ. ಇದರ ಬಹುಮಾನ ವಿತರಣೆ ಕಾರ್ಯಕ್ರಮ ಹಾಗೂ ಕೊಗನೊಳಿ ಗ್ರಾಮ ಪಂಚಾಯಿತಿ ವತಿಯಿಂದ ಆಶಾರಾಣಿ ವೀರಕುಮಾರ್ ಪಾಟೀಲ್ ಇವರಿಗೆ ಸನ್ಮಾನ ಸಮಾರಂಭ, ಅದೇ ರೀತಿ ಅಂಬಿಕಾ ಸಂಸ್ಥೆ ವತಿಯಿಂದ ಉಚಿತವಾಗಿ ಸ್ತ್ರೀಯರ ಮಾರ್ಗದರ್ಶನ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸ್ಥಳೀಯ ಗಾಂಧಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಚಿಕೆ ಮಾಡಲು ಅಂಬಿಕಾ ಸಂಸ್ಥೆ ವತಿಯಿಂದ ಸೌಭಾಗ್ಯವತಿಗಳಿಗೆ ಕಾರ್ಯಕ್ರಮ ನೆರವೇರಿದ್ದು ಇಲ್ಲಿಯ ಕುರುಬರ ಸಮಾಜದ ಸಂಘಟನೆ ವತಿಯಿಂದ ಡೊಳ್ಳಿನ ಪದಗಳ ಕಾರ್ಯಕ್ರಮ ಗೀತ ಗಾಯನ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರ ಪುತ್ರ ಚಿಕ್ಕೋಡಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಪಂಕಜ್ ವೀರಕುಮಾರ್ ಪಾಟೀಲ್ ತಿಳಿಸಿದರು.