ಧಾರವಾಡ - ಹುಬ್ಬಳ್ಳಿ

ಧರ್ಮ ರಕ್ಷಣೆಗೆ ವೀರಭದ್ರ ಅವತಾರ: ಶ್ರೀಅಭಿನವ ಸಿದ್ಧಲಿಂಗ ಸ್ವಾಮೀಜಿ

ಧರ್ಮ ರಕ್ಷಣೆಗೆ ವೀರಭದ್ರ ಅವತಾರ: ಶ್ರೀಅಭಿನವ ಸಿದ್ಧಲಿಂಗ ಸ್ವಾಮೀಜಿ

ಧಾರವಾಡ 04: ಎಲ್ಲಿಯೂ ಶ್ರೀವೀರಭದ್ರ ದೇವರು ಅಧರ್ಮವನ್ನು ಸಹಿಸಿಲ್ಲ. ದುಷ್ಟರಿಗೆ ಮತ್ತು ದುಷ್ಟ ಪ್ರವೃತ್ತಿಗಳಿಗೆ ಅವಕಾಶ ನೀಡದೇ ಧರ್ಮ ರಕ್ಷಣೆಗಾಗಿ ಶಿವಸಂಕಲ್ಪದಂತೆ ಭಾದ್ರಪದ ಮಾಸದ ಮೊದಲ ಮಂಗಳವಾರ ಶ್ರೀವೀರಭದ್ರ ದೇವರ ಅವತಾರವಾಗಿದೆ ಎಂದು ಇನಾಂಹೊಂಗಲ ವಿರಕ್ತಮಠದ ಶ್ರೀಅಭಿನವ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.  

ಅವರು ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಭಕ್ತ ಸಮೂಹ ಹಮ್ಮಿಕೊಂಡಿದ್ದ ಶ್ರೀವೀರಭದ್ರ ದೇವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎಂದರು. ಸದಾಕಾಲವೂ ಸದಾಚಾರ, ಸತ್ಯ-ಶುದ್ಧ ನೀತಿ-ಮೌಲ್ಯಗಳ ಜನಪರ ಸಂಸ್ಕೃತಿಯನ್ನು ಎತ್ತಿಹಿಡಿದ ಕೀರ್ತಿ ಶ್ರೀವೀರಭದ್ರ ದೇವರಿಗೆ ಸಲ್ಲುತ್ತದೆ ಎಂದರು. 

ಜನಮನದಲ್ಲಿ ‘ಈರಣ್ಣ’ ಎಂದೇ ಕರೆಯಿಸಿಕೊಳ್ಳುವ ಶ್ರೀವೀರಭದ್ರ ದೇವರ ಅರ್ಚನೆ, ಆರಾಧನೆ ಮತ್ತು ಅವತಾರದ ಮಹಿಮೆಯನ್ನು ನಮ್ಮ ಜನಪದ ಸಾಹಿತ್ಯದ ಒಡಪುಗಳು ಇಂದಿಗೂ ಪ್ರಚಲಿತವಾಗಿವೆ ಎಂದೂ ಇನಾಂಹೊಂಗಲ ಶ್ರೀಗಳು ಹೇಳಿದರು.  

ಉಪ್ಪಿನಬೆಟಗೇರಿಯ ಶ್ರೀಪ್ರಭು ದೇವರು ಅಧ್ಯಕ್ಷತೆವಹಿಸಿದ್ದರು. ವಿವಿಧ ಜನಪದ ವಾಧ್ಯ-ಮೇಳಗಳೊಂದಿಗೆ ವೀರಗಾಸೆಯ ಪುರವಂತರು, ಮಹಿಳೆಯರು ಹಾಗೂ ಹಾರೋಬೆಳವಡಿ ಗ್ರಾಮದ ಗಣ್ಯರು ಶ್ರೀವೀರಭದ್ರ ದೇವರ ಪಲ್ಲಕ್ಕಿ ಉತ್ಸವವದಲ್ಲಿ ಪಾಲ್ಗೊಂಡಿದ್ದರು. ಶ್ರೀವೀರಭದ್ರ ದೇವರ ಜಯಂತಿ ಅಂಗವಾಗಿ ಬಸಯ್ಯ ಸಿದ್ಧಗಿರಿಮಠ ಮತ್ತು ಕುಟುಂಬ ವರ್ಗದವರು ದಾಸೋಹಸೇವೆ ಸಲ್ಲಿಸಿದರು. 


ಸುದ್ದಿ ಓದಿ