ಧಾರವಾಡ - ಹುಬ್ಬಳ್ಳಿ

ವಸಂತ ಕನಕಾಪೂರ ಹಾಗೂ ಪಂ. ಬಸವರಾಜ ಬೆಂಡಿಗೇರಿ ಸ್ಮರಣೆಯಲ್ಲಿ ರಾಷ್ಟ್ರೀಯ ಸಂಗೀತೋತ್ಸವ

ವಸಂತ ಕನಕಾಪೂರ ಹಾಗೂ ಪಂ. ಬಸವರಾಜ ಬೆಂಡಿಗೇರಿ ಸ್ಮರಣೆಯಲ್ಲಿ  ರಾಷ್ಟ್ರೀಯ ಸಂಗೀತೋತ್ಸವ

ವಸಂತ ಕನಕಾಪೂರ ಹಾಗೂ ಪಂ. ಬಸವರಾಜ ಬೆಂಡಿಗೇರಿ ಸ್ಮರಣೆಯಲ್ಲಿ  ರಾಷ್ಟ್ರೀಯ ಸಂಗೀತೋತ್ಸವ 

ಧಾರವಾಡ 06 : ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಭಾರತ ಸರಕಾರದ ಸಂಸ್ಕೃತಿ ಮಂತ್ರಾಲಯದ ಆಶ್ರಯದಲ್ಲಿ ಪಂ. ವಸಂತ ಕನಕಾಪೂರ ಹಾಗೂ ಪಂ. ಬಸವರಾಜ ಬೆಂಡಿಗೇರಿ ಅವರ ಸ್ಮರಣೆಯಲ್ಲಿ ರಾಷ್ಟ್ರೀಯ ಸಂಗೀತೋತ್ಸವವನ್ನು ದಿನಾಂಕ: 09.11.2024 ಹಾಗೂ 10.11.2024ರಂದು ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಏರಿ​‍್ಡಸಿದೆ.   

ಸಂಗೀತೋತ್ಸವವನ್ನು ಕವಿವಿ ಕುಲಪತಿ ಡಾ.ಬಿ.ಎಮ್‌.ಪಾಟೀಲ ಉದ್ಘಾಟಿಸುವರು.  ಮುಖ್ಯ ಅತಿಥಿಗಳಾಗಿ ಹಿರಿಯ ನಟ, ನಿರ್ದೇಶಕ ಡಾ. ಶಶಿಧರ ನರೇಂದ್ರ ಪಂ. ವಸಂತ ಕನಕಾಪೂರ ಹಾಗೂ ಪಂ. ಬಸವರಾಜ ಬೆಂಡಿಗೇರಿ ಕುರಿತು ಮಾತನಾಡುವರು.  ಕವಿವಿ ಕಲಾನಿಕಾಯದ ಡೀನರಾದ ಡಾ. ಮೃತ್ಯುಂಜಯ ಅಗಡಿ ಅತಿಥಿಗಳಾಗಿ ಪಾಲ್ಗೊಳ್ಳುವರು.  ಬನುತಾಯಿ ಕನಕಾಪೂರ ಹಾಗೂ ಮೋಹನ ಬೆಂಡಿಗೇರಿ ಉಪಸ್ಥಿತರಿರುವರು. ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಅಧ್ಯಕ್ಷತೆ ವಹಿಸುವರು.  ಸಮಾರಂಭದ ಅಂಗವಾಗಿ ತಬಲಾ ಕಲಾವಿದ ಸುರೇಶ ನಿಡಗುಂದಿ ಹಾಗೂ ಹಾರ್ಮೊನಿಯಂ ಕಲಾವಿದ ಬಸವರಾಜ ಹಿರೇಮಠ ಅವರನ್ನು ಸನ್ಮಾನಿಸಲಾಗುವುದು.   

ದಿನಾಂಕ: 09.11.2024ರಂದು ಮುಂ.9.30 ರಿಂದ ರಾತ್ರಿ 9.30ರ ವರೆಗೆ ಜರುಗುವ ಸಂಗೀತೋತ್ಸವದಲ್ಲಿ ಹುಬ್ಬಳ್ಳಿಯ ಖ್ಯಾತ ಗಾಯಕ ಡಾ.ಅಶೋಕ ಹುಗ್ಗಣ್ಣವರ, ಧಾರವಾಡದ ಡಾ.ಮೃತ್ಯುಂಜಯ ಅಗಡಿ, ಮೈಸೂರಿನ ಡಾ.ಸ್ವೇತಾ ಮಡಪ್ಪಾಡಿ, ಧಾರವಾಡದ ವಿದುಷಿ ಭಾರ್ಗವಿ ಕುಲಕರ್ಣಿ, ಡಾ.ಅಯ್ಯಪ್ಪಯ್ಯ ಹಲಗಲಿಮಠ ಗಾಯನ ಪ್ರಸ್ತುತ ಪಡಿಸುವರು.  ಯಾದಗಿರಿಯ ಡಾ.ಗುರುಬಸವ ಮಹಾಮನೆ ಹಾಗೂ ಗದಗದ ಸುರೇಶ ಮಂಗಳೂರು ವಯೋಲಿನ ವಾದನ, ಹುಬ್ಬಳ್ಳಿಯ ನಿಖಿಲ್ ಜೋಶಿ ಅವರು ಸಿತಾರ ವಾದನ ಹಾಗೂ ಶ್ರೀಧರ ಭಜಂತ್ರಿ ಅವರು ಶಹನಾಯಿ ಪ್ರಸ್ತುತ ಪಡಿಸುವರು. ಸಹಕಲಾವಿದರಾಗಿ ಪಂ.ಅಲ್ಲಮಪ್ರಭು ಕಡಕೋಳ, ವಾದಿರಾಜ ದಂಡಾಪೂರ, ಶ್ರೀಧರ ಮಾಂಡ್ರೆ, ಡಾ.ಗೋಪಿಕೃಷ್ಣ ಕೆ.ಜಿ., ಡಾ.ಪರಶುರಾಮ ಕಟ್ಟಿಸಂಗಾವಿ, ಬಸವರಾಜ ಹಿರೇಮಠ, ಮಳೆಮಲ್ಲೇಶ ಹೂಗಾರ ಪಾಲ್ಗೊಳ್ಳುವರು.   

ಡಾ.ಶಶಿಧರ ನರೇಂದ್ರ ರಚನೆ ಹಾಗೂ ನಿರ್ದೇಶನದ “ವಸಂತ ರಾಗ” ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳುವುದು. 

ದಿನಾಂಕ: 10.11.2024ರಂದು ಸಂಜೆ 5.30ಕ್ಕೆ ಜರುಗುವ ನೃತ್ಯೋತ್ಸವದಲ್ಲಿ ಗಣೇಶ ನೃತ್ಯ ಶಾಲೆಯ ವಿದುಷಿ ರೋಹಿಣಿ ಇಮಾರತಿ ಮತ್ತು ತಂಡ, ಉಪಾಧ್ಯೆ ನೃತ್ಯ ವಿಹಾರದ ವಿದುಷಿ ಪ್ರಮೋಧಾ ಉಪಾಧ್ಯೆ ಮತ್ತು ತಂಡ, ಭರತ ನೃತ್ಯ ಅಕಾಡೆಮಿಯ ವಿದ್ವಾನ ರಾಜೇಂದ್ರ ಟೊಣಪಿ ಮತ್ತು ತಂಡ, ಹುಬ್ಬಳ್ಳಿಯ ವಿದುಷಿ ಡಾ. ಸೀಮಾ ಉಪಾಧ್ಯಾಯ ಮತ್ತು ತಂಡ ಹಾಗೂ ಕಲಾರ​‍್ಣ ಟ್ರಸ್ಟ್‌ನ ವಿದುಷಿ ಸವಿತಾ ಹೆಗಡೆ ಮತ್ತು ತಂಡದ ಕಲಾವಿದರು ಶಾಸ್ತ್ರೀಯ ನೃತ್ಯಗಳ ಪ್ರದರ್ಶನ ನೀಡಲಿದ್ದಾರೆ.  

ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ, ಸಂಯೋಜಕ ಪ್ರಕಾಶ ಬಾಳಿಕಾಯಿ, ಸಂಚಾಲಕಿ ವಿದುಷಿ ಸುಜಾತಾ ಗುರವ, ಡಾ. ಎ.ಎಲ್‌.ದೇಸಾಯಿ, ಡಾ.ಗುರುಬಸವ ಮಹಾಮನೆ ಇದ್ದರು. 


ಸುದ್ದಿ ಓದಿ