ಶಿಗ್ಗಾವ್

ಕಷ್ಟದಲ್ಲಿ ಇದ್ದವರಿಗೆ ಸಹಾಯ ಹಸ್ತ ಚಾಚುತ್ತಿರುವ ವರುಣಗೌಡ್ರ

ಕಷ್ಟದಲ್ಲಿ ಇದ್ದವರಿಗೆ  ಸಹಾಯ ಹಸ್ತ ಚಾಚುತ್ತಿರುವ ವರುಣಗೌಡ್ರ

ಶಿಗ್ಗಾವಿ 18 : ಅತಿಯಾದ ಮಳೆಯಿಂದ ಕುನ್ನೂರ ಗ್ರಾಮದ ಮಾದೇವಿ ಓಲೇಕಾರ ಎನ್ನುವವರ ಮನೆ ಬಿದ್ದು ಅಪಾರ ಪ್ರಮಾಣದ ಹಾನಿಯುಂಟಾಗಿದ್ದು ಅವರಿಗೆ ಆ ಸುದ್ದಿಯನ್ನು ತಿಳಿದು ವರುಣಗೌಡ ಪಾಟೀಲ ಬೆಂಗಳೂರಿನಲ್ಲಿ ಇದ್ದರು ಸಹ ಅವರ ಅಭಿಮಾನಿ ಬಳಗದವರ ಕಡೆಯಿಂದ ತುರ್ತಾಗಿ 5 ಸಾವಿರ ರೂಗಳನ್ನು ಸಹಾಯ ಧನದ ರೂಪದಲ್ಲಿ ನೀಡಿರುವುದು ಸ್ವಾಗತಾರ್ಹ ಎಂದು ಕುನ್ನೂರ ಗ್ರಾಮ ಮುಖಂಡರಾದ ಗಂಗಪ್ಪ ಹುಲ್ಲೂರ ಅವರು ಹೇಳಿದರು.

ಶ್ಯಾಡಂಬಿಯ ಯುವ ಮುಖಂಡರು ಲ್ಯಾಂಡ್ ಲಾರ್ಡ್‌ ಆದ ವರುಣಗೌಡ ಪಾಟೀಲ ಅವರ ಸಹಾಯ ಧನವನ್ನು ಮನೆ ಬಿದ್ದ ಕುಟುಂಬಕ್ಕೆ ಹಸ್ತಾಂತರಿಸಿ ಮಾತನಾಡಿದ ಅವರು ಸರ್ಕಾರದಿಂದ ಪರಿಹಾರ ಬರುವುದಕ್ಕಿಂತ ಮುಂಚೇನೆ ನಮ್ಮ ಯುವ ನಾಯಕರಾದ ವರುಣಗೌಡ ಪಾಟೀಲ ಅವರು ನೊಂದವರಿಗೆ ಧ್ವನಿಯಾಗಿ ಅವರು ಬೆಂಗಳೂರಿನಲ್ಲಿ ಇದ್ದರು ಸಹ ಅವರ ಸಹಾಯ ಮಾಡುವ ಗುಣ ಮೆಚ್ಚುವಂತದ್ದು ಎಂದರು. 

ಪತ್ರಕರ್ತ ಬಿ.ಎಸ್ ಹಿರೇಮಠ ಅವರು ಮಾತನಾಡಿ ಇಂದು ನಮ್ಮ ಗ್ರಾಮದ ಮಾದೇವಿ ಓಲೇಕಾರ ಅವರು ಮಳೆಯಿಂದ ಮನೆ ಬಿದ್ದು ಸಾಕಷ್ಟು ನಷ್ಟವಾದ ಸುದ್ದಿ ತಿಳಿದು ವರುಣಗೌಡ ಪಾಟೀಲ ಅವರು ಸಹಾಯ ಮಾಡಿರುವುದು ನೊಂದವರಿಗೆ ಅನೂಕೂಲವಾಗಿದೆ ಎಂದರು. 

ಜನಪದ ಕಲಾವಿದ ಶರೀಫ ಮಾಕಪ್ಪನವರ ಅವರು ಮಾತನಾಡಿ ಯುವ ಮುಖಂಡರಾದ ವರುಣಗೌಡ್ರ ಪಾಟೀಲ ಅವರು ಇಂತಹ ಅನೇಕ ಸಾಮಾಜಿಕ ಕಳಕಳಿಯನ್ನು ಹೊಂದಿದವರು ಇಂದು ಸಹ ಕುನ್ನೂರ ಗ್ರಾಮದಲ್ಲಿ ಮಳೆಗೆ ಮನೆ ಹಾನಿಯಾದ ಕುಟುಂಬಕ್ಕೆ ಅವರು ಬರದೇ ಇದ್ದರು ಸಹ ಅವರ ಸಹಚರರ ಕೈಯಲ್ಲಿ ತುರ್ತಾಗಿ ಸಹಾಯಧನ ನೀಡುವುದು ಅವರ ದೊಡ್ಡತನ ಎಂದರು. 

ಈ ಸಂದರ್ಭದಲ್ಲಿ ಕುನ್ನೂರ ಗ್ರಾಮದ ಯುವ ಮುಖಂಡರಾದ ಗಂಗಪ್ಪ ಹುಲ್ಲೂರ,  ಅಸ್ಪಖಲಿ ಮತ್ತೇಖಾನ, ಜೈಲಾನಿ ಮತ್ತೇಖಾನ, ಕೋಟೆಪ್ಪ ಮಾಂತೇಶ ಓಲೇಕಾರ ಸಂಜೀವಣ್ಣವರ ಮಾಬುಲಿ ಮತ್ತೇಖಾನ ಹಸನ ಹಾಗೂ ವರುಣಗೌಡ್ರ ಪಾಟೀಲ ಅಭಿಮಾನಿ ಬಳಗದ ಸದಸ್ಯರು ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ