ವಿವಿಧಡೆ ಸಿದ್ದೇಶ್ವರ ಶ್ರೀಗೆ ಭಾವಪೂರ್ಣ ಶ್ರದ್ಧಾಂಜಲಿ
ಇಂಡಿ: ಪಟ್ಟಣದ ಆರ್.ಎಮ್. ಶಹಾ ಪಬ್ಲಿಕ್ ಶಾಲೆಯಲ್ಲಿ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮೀಜಿಯವರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಆರ್. ಶಹಾ, ಪರವೀಣ ಜಮಾದಾರ, ಪ್ರಕಾಶ ಪಾಟೀಲ್, ಸೇರಿದಂತೆ ಶಾಲಾ ಆಡಳಿತ ಮಂಡಳಿಯ ಸದಸ್ಯರು ಇದ್ದರು.
ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ವಿಶ್ವಭಾರತಿ ವಿದ್ಯಾಕೇಂದ್ರದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ನುಡಿ ನಮನ ಸಲ್ಲಿಸಿದರು.
ಸಂಸ್ಥೆಯ ಅದ್ಯಕ್ಷ ವಿ.ಜಿ. ಕಲ್ಮನಿ, ಶ್ರೀದೇವಿ ಕಲ್ಮನಿ, ಪಿ.ಜಿ. ಕಲ್ಮನಿ ಸೇರಿದಂತೆ ಆಢಳಿತ ಹಾಗೂ ಸಿಬ್ಬಂದಿ ವರ್ಗ ನುಡಿನ ಮನ ಸಲ್ಲಿಸಿದರು.
ಇಂಡಿ: ತಾಲೂಕಿನ ಚಿಕ್ಕ ಬೇವನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ನುಡಿ ನಮನ ಸಲ್ಲಿಸಿದರು.್ಲ ವೈ.ಎಂ ಪೂಜಾರ, ಎಸ್.ಎಚ್. ಅತನೂರ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.