ರಾಣೆಬೆನ್ನೂರ

ದಸರಾ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ದಸರಾ  ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ರಾಣಿಬೆನ್ನೂರ:4 ತಾಲೂಕಿನ ಸುಕ್ಷೇತ್ರವೆಂದೇ ಹೆಸರಾದ ದೇವರಗುಡ್ಡದ ಮಾಲತೇಶಸ್ವಾಮಿಯ ದಸರಾ  ಪ್ರಯುಕ್ತ ಅ.3 ರಿಂದ ಅ. 25 ರವರೆಗೆ ಕಾರ್ಣಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಅ.3 ರಂದು ಘಟಸ್ಥಾಪನೆ (ನವರಾತ್ರಿ ಆರಂಭ), ಅ.10 ದುರ್ಗಾಷ್ಟಮಿ, ಅ.11 ರಂದು ಮಹಾನವಮಿ, ಸಂಜೆ 6 ಗಂಟೆಗೆ ಬಂಡಾರದ ಗುರುಗಳ ಆಶೀರ್ವಾದ, ನಂತರ ಕಾರ್ಣಿಕ ಅಜ್ಜನವರಿಂದ ಕಾರ್ಣಿಕೋತ್ಸವ ನೆರವೇರುವುದು. 

ಅ.12 ರಂದು ವಿಜಯದಶಮಿ ಸಂಜೆ 4 ಗಂಟೆಯಿಂದ ಕಂಚವೀರರಿಂದ ಶಸ್ತ್ರ ಪವಾಡಗಳು, ಗೊರವಯ್ಯರಿಂದ ಸರಪಳಿ ಪವಾಡಗಳು, ನಂತರ ಸಂಜೆ 6 ಗಂಟೆಗೆ ಬನ್ನಿ ಮುಡಿಯುವುದು. ಅ.17 ರಂದು ಶೀಗಿ ಹುಣ್ಣಿಮೆ ಹಾಗೂ ಅ. 25 ರಂದು ಕುದುರೆ ಹಬ್ಬ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.  

ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮ ಪಂಚಾಯತಿ ವತಿಯಿಂದ ರಣದಮ್ಮದೇವಿ ಗುಡಿ ಹತ್ತಿರ ಭಾರಿ ದನಗಳ ಜಾತ್ರೆಯು ನಡೆಯುತ್ತದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.  


ಸುದ್ದಿ ಓದಿ