ರಾಣೆಬೆನ್ನೂರ

ಕೃಷ್ಣಜನ್ಮಾಷ್ಟಮಿ ನಿಮಿತ್ತ ವಿವಿಧ ಕಾರ್ಯಕ್ರಮಗಳು

ಕೃಷ್ಣಜನ್ಮಾಷ್ಟಮಿ ನಿಮಿತ್ತ ವಿವಿಧ ಕಾರ್ಯಕ್ರಮಗಳು

ಕೂಡ್ಲಿ ಆರ್ಯ ಅಕ್ಷೊಭ್ಯತೀರ್ಥರ ಚಾತುರ್ಮಾಸ್ಯ; 

ರಾಣೇಬೆನ್ನೂರ 28: ನಗರದ ಕೋಟೆಯ ಭಾಗದಲ್ಲಿ ಶ್ರೀ ಸತ್ಯಾಭಿಜ್ಞರ ಮಠದ ಮುಂಭಾಗದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ನಿಮಿತ್ತ ವಿಶೇಷ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು. ಕೂಡಲಿ ಆಯ್ ಅಕ್ಷೊಭ್ಯತೀರ್ಥ ಮಠದ ಶ್ರೀ ರಘುವಿಜಯ ತೀರ್ಥರ 22ನೇಯ ಚಾತುರ್ಯಮಾಸದ ನಿಮಿತ್ತ ಶ್ರೀಗಳಿಂದ ವೈಕುಂಟ ರಾಮದೇವರ ಪೂಜೆ  ಕೃಷ್ಣದೇವರ ಪೂಜೆ, ತೊಟ್ಟಲು ಹಾಕುವುದು ಹಾಗೂ ರಾತ್ರಿ ಅರ್ಘ್ಯ ಬಿಡುಸುವ ಕಾರ್ಯಕ್ರಮವು ನಡೆಯಿತು.  

ಚಿಕ್ಕಮಕ್ಕಳಿಂದ ಶ್ರೀಕೃಷ್ಣನ ವೇಷಭೂಷಣ ಸ್ಪರ್ಧೆ ಮತ್ತು ಗ್ರಾಮ ಪ್ರದಕ್ಷಣೆ ನಡೆಯಿತು. ಅಲ್ಲದೆ ಮಧ್ಯರಾತ್ರಿ ಯುವಕರಿಂದ ಗೋಪಾಲ( ಕಾವಲಿ) ಗಡಿಗೆ ಒಡಿಯುವ ಮೂಲಕ ಸಂಭ್ರಮಿಸಿದರು. ಒಬ್ಬೊರಿಗೊಬ್ಬರು ಬಣ್ಣಹಚ್ಚುವುದು, ಓಕಳಿ ಆಡುವ ಮೂಲಕ ಗೋಕಲಷ್ಟಮಿಯ ಹಬ್ಬದ ಆಚರಣೆಯನ್ನು ವಿಶೇಷವಾಗಿ ಆಚರಿಸಿದರು. 

ಈ ಸಂದರ್ಭದಲ್ಲಿ ಜಯತೀರ್ಥಚಾರ ಪಾಂಡುರಂಗಿ, ರಂಗವಿಠಲಾಚಾರ್ಯ,ಚೆಂದಿ , ರಂಗಣ್ಣಾ ದೇಶಪಾಂಡೆ, ಪಾಂಡಣ್ಣಾ ರಾಯಚೂರ, , ಗೋವಿಂದ ಚಿಮ್ಮಲಗಿ, ಧೀರೇಂದ್ರ ಪಂಚಬಾವಿ, ವಾದಿರಾಜ.ಗಲಗಲಿ, ಜಯರಾಮ ಮಠದ, ಸುಜೇಯ.ಚೆಂದಿ, ರಂಗವಿಠಲ ಚೆಂದಿ ಅಮಿತ,  ಆದಿತ್ಯ ಕುಲ್ಕರ್ಣಿ, ನರಸಿಂಹ ಚೆಂದಿ, ಸಂಜೀವ ಪಾಂಡುರಂಗಿ, ಪ್ರಮೋದಿ ಚಿಮ್ಮಲಗಿ, ವಾದಿರಾಜ.ಶಿರಹಟ್ಟಿ, ಶ್ರೀನಿಧಿ, ಕವೀಂದ್ರ ಸಂಜೀವ ಶಿರಹಟ್ಟಿ  ಮುಂತಾದವರು ಇದ್ದರು. 


ಸುದ್ದಿ ಓದಿ