ರಾಣೆಬೆನ್ನೂರ

ರಾಣೇಬೆನ್ನೂರಲ್ಲಿ ವಿವಿಧ ಪಕ್ಷದ ಮುಖಂಡರು ಬಿಜೆಪಿಗೆ ಸೇರ್ಪಡೆ

ರಾಣೇಬೆನ್ನೂರಲ್ಲಿ ವಿವಿಧ ಪಕ್ಷದ ಮುಖಂಡರು ಬಿಜೆಪಿಗೆ  ಸೇರ್ಪಡೆ

ರಾಣೇಬೆನ್ನೂರು, 30:  ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ರಾತ್ರಿ ನಡೆದ ಭಾರತೀಯ ಜನತಾ ಪಕ್ಷದ, ಹಾವೇರಿ ಗದಗ್ ಲೋಕಸಭಾ ಚುನಾವಣಾ, ಪ್ರಚಾರಾರ್ಥವಾಗಿ ಪಾಲ್ಗೊಂಡಿದ್ದ,  ಚುನಾವಣಾ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ,ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ, ರಾಣೇಬೆನ್ನೂರು ತಾಲೂಕಿನ, ವಿವಿಧ ಪಕ್ಷಗಳ ಮುಖಂಡರು  ಮತ್ತು ಕಾರ್ಯಕರ್ತರು, ತಮ್ಮ ಮಾತ್ರ ಪಕ್ಷಗಳನ್ನು ತೊರೆದು ಬಿಜೆಪಿ ಗೆ ಸೇರ್ಪಡೆಗೊಂಡರು. ಪಕ್ಷಕ್ಕೆ ಸೇರ್ಪಡೆಯಾದ  ನೂರಾರು ಮುಖಂಡರು ಮತ್ತು ಕಾರ್ಯಕರ್ತರನ್ನು, ಅಭ್ಯರ್ಥಿ, ಬಸವರಾಜ ಬೊಮ್ಮಾಯಿ ಪಕ್ಷದ  ಶಾಲು ಹೊದಿಸಿ, ಪುಷ್ಪ ಮಾಲೆ ಹಾಕಿ  ಗೌರವಿಸಿ ಪಕ್ಷಕ್ಕೆ ಸ್ವಾಗತಿಸಿ ಅಭಿನಂದಿಸಿ ಅವರನ್ನು ಬರಮಾಡಿಕೊಂಡರು. ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಅರುಣ್ ಕುಮಾರ್ ಪೂಜಾರ, ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.          

ಪಕ್ಷದ ಮುಖಂಡರಾದ, ಭೈರತಿ ಬಸವರಾಜ, ಬಿ.ಸಿ. ಪಾಟೀಲ್, ವಿರೂಪಾಕ್ಷಪ್ಪ ಬಳ್ಳಾರಿ. ಬೈರಾತಿ ಗೀರೀಶ್, ಡಾ:ಬಸವರಾಜ್ ಕೇಲಗಾರ್, ಕೆ. ಶಿವಲಿಂಗಪ್ಪ, ಮಂಜುನಾಥ ಓಲೇಕಾರ, ರಮೇಶ್ ಗುತ್ತಲ, ದೀಪಕ  ಹರಪನಹಳ್ಳಿ, ರಮೇಶನಾಯಕ್, ಪರಮೇಶಪ್ಪ ಗೊಳಣ್ಣನವರ್, ಶಿವಕುಮಾರ್ ನರಸಗೊಂಡರ್, ಎಸ್‌ಎಸ್‌. ರಾಮಲಿಂಗಣ್ಣನವರ್, ಸಂತೋಷಕುಮಾರ್ ಪಾಟೀಲ್, ಭಾರತಿ ಅಳವಂಡಿ, ಗಂಗಮ್ಮ ಹಾವನೂರು, ಮಂಜುಳಾ ಹತ್ತಿ,ಬಸವರಾಜ್ ಹುಲ್ಲತ್ತಿ, ಮಲ್ಲಣ್ಣ ಅಂಗಡಿ,ಪ್ರಕಾಶ್ ಪೂಜಾರ, ಎ. ಬಿ. ಪಾಟೀಲ್, ಜಿ. ಜಿ. ಹೊಟ್ಟಿಗೌಡ್ರ, ರಾಜೇಂದ್ರ ಬಸೇನಾಯಕ,ಸಿದ್ದಣ್ಣ ಚಿಕ್ಕಬಿದರಿ,ಚೋಳಪ್ಪ ಕಸವಾಳ, ಸೇರಿದಂತೆ, ತಾಲೂಕಿನ ಮತ್ತು ಜಿಲ್ಲೆಯ ವಿವಿಧ ಘಟಕಗಳ, ಮುಖಂಡರು ನಾಯಕರು  ಉಪಸ್ಥಿತರಿದ್ದರು. 


ಸುದ್ದಿ ಓದಿ