ಹೂವಿನ ಹಡಗಲಿ

ಸೇಡಂ ವಿಕಾಸ ಅಕಾಡೆಮಿಯಿಂದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳು

ಸೇಡಂ ವಿಕಾಸ ಅಕಾಡೆಮಿಯಿಂದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳು

ಹೂವಿನಹಡಗಲಿ 23: ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ವಿಕಾಸ ಅಕಾಡೆಮಿ ವಿಜಯನಗರ ಜಿಲ್ಲಾ ಮಟ್ಟದ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಮತ್ತು ಪಿಯುಸಿ, ಪದವಿ, ಸ್ನಾತ್ತಕೊತ್ತರ ವಿದ್ಯಾರ್ಥಿಗಳಿಗೆ ಪ್ರಬಂಧ  ಮತ್ತು ಭಾಷಣ ಸ್ಪರ್ಧೆಗಳನ್ನು ಇದೇ ತಿಂಗಳ 25ನೇ ತಾರೀಖು ರವಿವಾರ  ಏರಿ​‍್ಡಸಲಾಗಿದೆ. ಎಂದು ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ಎಂ.ಬಿ ಬಸ್ಸಣ್ಣ ತಿಳಿಸಿದರು.  

ಈಗಾಗಲೇ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷರರೊಂದಿಗೆ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಹಾಗು ಪ್ರಥಮ ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ವಿತರಿಸಲಾಗುವುದು ಎಂದು ವಿಕಾಸ ಅಕಾಡೆಮಿಯ ತಾಲೂಕು ಸಂಚಾಲಕ ನಟರಾಜ ಬದಾಮಿಯವರು ತಿಳಿಸಿದರು.ಜಿಲ್ಲಾ ಮಟ್ಟದ ಸ್ಪರ್ಧೆಗಳು ನಡೆಯುವ ಸ್ಥಳ : ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಹಗರಿ ಬೊಮ್ಮನಹಳ್ಳಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳು ಏರಿ​‍್ಡಸಲಾಗಿದೆ. ಮಾತೃಶಕ್ತಿ, ಶಿಕ್ಷಣ ಮತ್ತು ನಾವು, ಯುವಶಕ್ತಿ,ಕೃಷಿ ಆಧಾರಿತ ಗ್ರಾಮ,ಆಹಾರ ನೈರ್ಮಲ್ಯ ಆರೋಗ್ಯ, ಗ್ರಾಮ ಮತ್ತು ದೇಶದ ಉನ್ನತಿಗೆ ಸ್ವಯಂ ಉದ್ಯೋಗದ ಕೊಡುಗೆ, ಪ್ರಕೃತಿ ಮತ್ತು ನಾವು, ಗ್ರಾಮ ಮತ್ತು ದೇಶ ಸೇವೆಯಲ್ಲಿ ಸಂಘ ಸಂಘಟನೆಗಳ ಪಾತ್ರ, ದೇಶದ ಅಖಂಡತೆಯಲ್ಲಿ ಧರ್ಮ ಮತ್ತು ಸಂಸ್ಕೃತಿಯ ಪಾತ್ರ ಈ 9 ವಿಷಯಗಳ ಮೇಲೆ ಯಾವುದಾದರು ಒಂದು ವಿಷಯಕ್ಕೆ ಪ್ರಬಂಧ ಮತ್ತು ಭಾಷಣಕ್ಕೆ ಆಯ್ಕೆ ಮಾಡಿಕೊಳ್ಳಬೇಕು. ಹೆಸರು ನೊಂದಾಯಿಸಲು ದೂರವಾಣಿಗೆ ಸಂಪರ್ಕಿಸಿ : 73489 98043 


ಸುದ್ದಿ ಓದಿ