ವರಮಹಾಲಕ್ಷ್ಮಿ ಪೂಜೆ ಮಹಿಳೆಯರ ಆರ್ಥಿಕ ಸಬಲತೆಗೆ ಕ್ಷೇತ್ರದ ಕೊಡುಗೆ ಅಪಾರ: ಭಾರತಿ
ರಾಣೇಬೆನ್ನೂರು 16: ಮಹಿಳಾ ಆರ್ಥಿಕ ಸಾಮಾಜಿಕ ಮತ್ತು ಧಾರ್ಮಿಕ ಸಬಲತೆ, ಸ್ವಾವಲಂಬನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆಯು ಇಂದು ಅಪಾರವಾಗಿದೆ ಎಂದು ಬಸವಶ್ರೀ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಭಾರತಿ ಕುಮಾರ್ ಜಂಬಿಗಿ ಹೇಳಿದರು.
ಅವರು ಶುಕ್ರವಾರ ಬಸವನಗುಡಿ ನಗರದ ಪಾಂಡುರಂಗ ರುಕ್ಮಾಯಿ ಮಂದಿರದ ಸಭಾಭವನದಲ್ಲಿ ಎಸ್ಕೆಡಿಆರ್ಡಿ ಪಿಬಿಸಿ ಟ್ರಸ್ಟ್, ವರಮಹಾಲಕ್ಷ್ಮಿಪೂಜಾ ಸಮಿತಿ, ಹಾಗೂ ಮಾರುತಿ ನಗರ ವಲಯದ ಪ್ರಗತಿ ಬಂದು ಸ್ವಸಹಾಯ ಗುಂಪುಗಳ ಒಕ್ಕೂಟ ಆಯೋಜಿಸಿದ್ದ ಸಾಮೂಹಿಕ ವರ ಮಹಾಲಕ್ಷ್ಮಿ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಧರ್ಮದ ಅನುಯಾಯಿಗಳಾಗಿರುವ ಡಾ. ವೀರೇಂದ್ರ ಹೆಗಡೆಯವರು, ಮಹಿಳೆಯರ ಆರ್ಥಿಕ ಸಭಲತೆಯ ಮೂಲಕ, ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಅಳವಡಿಸಿಕೊಂಡು ಸಮಗ್ರ ಭಾರತೀಯ ಮಹಿಳೆಯರ ಮೂಲಕ ಸಂಸ್ಕೃತಿ ಸಂಸ್ಕಾರವನ್ನು ಬಿತ್ತಿ, ಅಪರೂಪದ ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವುದು ನಮ್ಮ ನಾಡಿನ ಮಹಿಳೆಯರ ಸೌಭಾಗ್ಯವಾಗಿದೆ ಎಂದರು.
ನರೇಂದ್ರ ಮೋದಿ ಅವರು ಭಾರತ ಕಂಡ ಅಪರೂಪದ ಪ್ರಧಾನ ಮಂತ್ರಿ ಈ ದೇಶದ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದು, ಸರ್ಕಾರದ ಬಹುದೊಡ್ಡ ಸಾಧನೆ ಅದೇ ರೀತಿ ಶ್ರೀ ಕ್ಷೇತ್ರ ಮತ್ತಷ್ಟು ಮಹಿಳೆಯರ ಸ್ವಾತಂತ್ರ್ಯಕ್ಕೆ ತನ್ನ ಸೇವೆ ಮಾಡುತ್ತಿರುವುದು ದೇಶದ ಹೆಮ್ಮೆಯ ಸಂಗತಿ ಎಂದ ಅವರು ಪುರುಷರಿಗೆ ಇಂದು ಯಾವುದಕ್ಕೂ ಮಹಿಳೆಯರು ಕೈ ಚಾಚುವ ಅಗತ್ಯವಿಲ್ಲ ಎಂದು ಶ್ರೀ ಕ್ಷೇತ್ರದ ಕಾರ್ಯ ಸಾಧನೆಗೆ ತಮ್ಮ ಕೃತಜ್ಞತೆ ಸಲ್ಲಿಸಿದರು.
ಮೌನ ವೃತಾಚರಣೆಯಲ್ಲಿದ್ದ, ಶನೈಶ್ಚರ ಮಂದಿರದ ಷ, ಬ್ರ. ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ, ನಗರ ಠಾಣಾ ಪಿಎಸ್ಐ, ಗಡ್ದೆಪ್ಪ ಗುಂಜಟಗಿ ಅವರು, ಇಂದು ಶೇಅ 16 ಮಾತೃ ಪ್ರಧಾನ ಕುಟುಂಬಗಳು ಇದ್ದರೇ, 85ಅ ರಷ್ಟು ಪಿತ್ರ್ರಧಾನ ಕುಟುಂಬಗಳಿವೆ. ಆಧುನಿಕ, ವ್ಯವಹಾರಿಕ ಬದುಕಿನ ಪರಿಣಾಮ ಮಾನಸಿಕ ಶಾಂತಿ, ನೆಮ್ಮದಿ, ಇಲ್ಲದೆ ನಿತ್ಯವೂ ಸಂಕಷ್ಟಗಳನ್ನು ಎದುರಿಸುವಂಥಾಗಿದೆ ಎಂದರು.
ದೇಶದ ಇತಿಹಾಸದಿಂದಲೂ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರೇ ಮೇಲುಗೈ ಸಾಧಿಸುತ್ತಾ ಬಂದಿರುವುದು, ಸಾಬೀತಾಗಿದೆ ಇದೀಗ ಮಹಿಳಾ ಆರ್ಥಿಕ ಸ್ವಾತಂತ್ರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಧಿಕಾರಿಗಳು ಮುನ್ನುಡಿ ಬರೆದು, ಮತ್ತಷ್ಟು ಸ್ವಾವಲಂಬತೆಗೆ ಸಹಕಾರಿಗಳಾಗಿದ್ದಾರೆ. ಎಂದರು.
ಮಹಿಳೆ ಅಬಲೆಯಲ್ಲ, ಅವಳು ಎಂದೆಂದಿಗೂ ಸಬಲೇ, ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗದೆ, ಹೊರ ಜಗತ್ತಿಗೆ ಬಂದು, ಧರ್ಮ ಸಂಸ್ಕೃತಿಯ, ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ಸಂಸ್ಕಾರ ಧೀಕ್ಷೆಯನ್ನು ನೀಡಿ, ವ್ಯಕ್ತಿತ್ವವನ್ನು ನಿರೂಪಿಸಲು ಮುಂದಾಗಬೇಕಾದ ಅಗತ್ಯವಿದೆ ಎಂದರು.
ಮಾಜಿ ಶಾಸಕ ಅರುಣ ಕುಮಾರ್ ಪೂಜಾರ ಅವರು ಬಿಜೆಪಿ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕ್ಷೇತ್ರದ, ವೀರೇಂದ್ರ ಹೆಗಡೆಯವರ ಸಲಹೆ ಸೂಚನೆಗಾಗಿ ಸರ್ಕಾರ ಅವರಿಗೆ ಸದಸ್ಯತ್ವ ಸ್ಥಾನ ನೀಡಿ ಗೌರವಿಸಿ ಈ ಮೂಲಕ ಎಲ್ಲ ಯೋಜನೆಗಳು, ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ಮುಂದಾಗಿದೆ ಎಂದರು. ಮಹಿಳೆ ಮತ್ತು ಆರೋಗ್ಯ ಕುರಿತು ಯೋಗ ಸಾಧಕ ಪಾಂಡುರಂಗಪ್ಪ ಪೂಜಾರ್ ಉಪನ್ಯಾಸ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ, ತಾಲೂಕಾ ಯೋಜನಾಧಿಕಾರಿ ಮಂಜುನಾಥಗೌಡ ಅವರು, ಸ್ವಾವಲಂಬಿ ಜೀವನಕ್ಕೆ ಸುಜ್ಞಾನ ನಿಧಿ, ಕೆರೆಕಟ್ಟೆ ನಿರ್ಮಾಣ, ನಿರ್ಗತಿಕರಿಗೆ ವಾಸಕ್ಕೆ ಮನೆ, ಅಸಹಾಯಕರಿಗೆ ಮಾಸಾಸನ, ಜನಮಂಗಲ,ಅಪಘಾತ, ಅನಾರೋಗ್ಯ ಪಿಡಿತರಿಗೆ ವಾಟರ್ ಬೆಡ್, ವ್ಹಿಲ್ ಚೇರ್, ವಾಕಿಂಗ್ ಸ್ಟಿಕ್, ಜನಜಾಗ್ರತಿ, ಜನಜಾತ, ಸ್ವಾಸ್ತ ಸಮಾಜ ನಿರ್ಮಾಣಕ್ಕಾಗಿ ಮಧ್ಯವರ್ಜನ ಶಿಬಿರ, ದೇಗುಲಗಳ ಸ್ವಚ್ಛತೆ, ವ್ಯವಹಾರಿಕ ಜೀವನಕ್ಕೆ ಸಿಡಬಿ ಸಾಲ ಯೋಜನೆ, ಸೇರಿದಂತೆ ಮತ್ತಿತರೆ ಅನೇಕ ಯೋಜನೆಗಳು ಜಾರಿಯಲ್ಲಿವೆ ಸಂಘದ ಸದಸ್ಯರು ಪ್ರಯೋಜನ ಪಡೆಯಲು ಮುಂದಾಗಬೇಕು ಎಂದರು. ವಿ ಎಸ್ ಎಸ್ ಸಂಸ್ಥಾಪಕ ಪ್ರಕಾಶ್ ಬುರಡಿಕಟ್ಟಿ, ನಗರಸಭಾ ಮಾಜಿ ಸದಸ್ಯ ಮಂಜುನಾಥ್ ಅವರ ಧರ್ಮಪತ್ನಿ ಶಶಿಕಲಾ ಗೌಡ ಶಿವಣ್ಣನವರ್, ಶಕುಂತಲಾ, ಪತ್ರಕರ್ತ ಮಂಜುನಾಥ ಹೊಸಪೇಟೆ, ಸ್ವಾಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ವಲಯ ಮೇಲ್ವಿಚಾರಕಿ ಲಕ್ಷ್ಮಿ ಸೇರಿದಂತೆ, ಪ್ರಗತಿ ಬಂದು ಸ್ವಸಹಾಯ ಒಕ್ಕೂಟದ ಅಧ್ಯಕ್ಷರು, ಸದಸ್ಯರು, ಪೂಜಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸದಸ್ಯರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಾಮೂಹಿಕ ವರಲಕ್ಷ್ಮಿ ಪೂಜಾ ಕಾರ್ಯದಲ್ಲಿ ಸ್ವ ಸಹಾಯ ಸಂಘಗಳ 500 ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಆನಿಮಠದ ಅರ್ಚಕ ಶಿವ ಕುಮಾರ ಸ್ವಾಮಿ ಅವರು ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಶಕುಂತಲಾ ಮಂಜುಳಾ ಸಂಗಡಿಗರು ಪ್ರಾರ್ಥಿಸಿದರು, ಸಮನ್ವಯ ಅಧಿಕಾರಿ ಶೋಭಾ ಸ್ವಾಗತಿಸಿದರು. ಕೃಷಿ ಅಧಿಕಾರಿ ರಮೇಶ್ ನಿರೂಪಿಸಿದರು. ವಲಯ ಮೇಲ್ವಿಚಾರಕಿ ಲಕ್ಷ್ಮಿ ವಿ. ವಂದಿಸಿದರು.