ಶಿಗ್ಗಾವ್

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮೋತ್ಸವ ಆಚರಣೆ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮೋತ್ಸವ ಆಚರಣೆ

ಶಿಗ್ಗಾವಿ 25: ಭಾರತ ಸೇವಾದಳ ತಾಲೂಕ ಸಮಿತಿ ಶಿಗ್ಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿಗ್ಗಾವಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  02 ಶಿಗ್ಗಾವಿ ಇವರ  ಸಂಯುಕ್ತ ಆಶ್ರಯದಲ್ಲಿ ಶಾಲಾ ಆವರಣದಲ್ಲಿ ಸಸಿ ನೆಡುವುದರ ಮೂಲಕ ವನಮೋತ್ಸವ ಆಚರಿಸಲಾಯಿತು. 

ಕ್ಷೇತ್ರಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ, ಭಾರತ್ ಸೇವಾದಳ ತಾಲೂಕ ಅಧ್ಯಕ್ಷ ಶಿವಾನಂದ್ ಮ್ಯಾಗೇರಿ,  ನೌಕರ ಸಂಘದ ಅಧ್ಯಕ್ಷ ಹಾಗೂ ತಾಲೂಕು ಸಮಿತಿ ಸದಸ್ಯ ಅರುಣ್ ಹುಡೇದಗೌಡ್ರ, ಭಾರತ್ ಸೇವಾದಳದ ತಾಲೂಕು ಕಾರ್ಯದರ್ಶಿ ಬಸವರಾಜ್ ಹೊಸಪೇಟೆ, ಜಿಲ್ಲಾ ಸಮಿತಿ ಸದಸ್ಯ ಮಂಜುನಾಥ ಹೊಳ್ಳೆ, ತಾಲೂಕು ಸಮಿತಿ ಸದಸ್ಯರಾದ ಎಸ್ ಎಫ್ ಮಸಳಿ, ಸೌಭಾಗ್ಯ ಟಿಪಿ ರೇಣುಕಾ ಹುಡೇದಗೌಡ್ರ, ಸುಧಾ ಮೂಲಿಮನಿ, ಎಸ್ ಡಿ ಎಮ್ ಸಿ ಅಧ್ಯಕ್ಷ ನಾಗರಾಜ ಬಡಿಗೇರ, ತಾಲೂಕು ಅಧಿನಾಯಕ ವಸಂತ ಬಂಕಾಪುರ, ಶಾಖಾ ನಾಯಕ ಬಿ ವ್ಹಾ ಹುಲಿಮನಿ, ಶಾಲಾ ಮುಖ್ಯೋಪಾಧ್ಯಾಯ ಕೊಪ್ಪದ, ಪ್ರಾಥಮಿಕ ನೌಕರರ ಸಂಘದ ಸದಸ್ಯ ಸುಮಾ ಸಿದ್ದು, ಜಿಲ್ಲಾ ಸಂಘಟನಾ ಸದಸ್ಯ ಬಸವರಾಜ ಗುರಿಕಾರ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು. 


ಸುದ್ದಿ ಓದಿ