ಮಕ್ಕಳಿಗೆ ಮೌಲ್ಯಗಳನ್ನು ಹೇಳಬೇಕಿದೆ ಕೇವಲ ಅಂಕಗಳಿಗೆ ಸೀಮಿತ ಮಾಡಬೇಡಿ: ಅಂಬಿಗೇರ
ಮಕ್ಕಳಿಗೆ ಮೌಲ್ಯಗಳನ್ನು ಹೇಳಬೇಕಿದೆ ಕೇವಲ ಅಂಕಗಳಿಗೆ ಸೀಮಿತ ಮಾಡಬೇಡಿ: ಅಂಬಿಗೇರ
ಶಿಗ್ಗಾವಿ 02 : ಮಕ್ಕಳಿಗೆ ಮೌಲ್ಯಗಳನ್ನು ಹೇಳಬೇಕಿದೆ ಕೇವಲ ಅಂಕಗಳಿಗೆ ಸೀಮಿತ ಮಾಡಬೇಡಿ, ಬೇರೆ ಮಕ್ಕಳೊಂದಿಗೆ ತಮ್ಮ ತಮ್ಮ ಮಕ್ಕಳನ್ನ ಹೋಲಿಕೆ ಮಾಡಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ಹೇಳಿದರು. ಪಟ್ಟಣದ ಪೀನೀಕ್ಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಮಕ್ಕಳ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು ಶಾಲೆಯ ಎಲ್ಲ ಮಕ್ಕಳಿಗೆ ವಸ್ತು ಪ್ರದರ್ಶನದಲ್ಲಿ ಭಾಗವಹಿಸುವಿಕೆ ಉತ್ತಮ ಬೆಳವಣಿಗೆಯಾಗಿದೆ ಜೀವನದಲ್ಲಿ ಬದುಕಿನ ಮೌಲ್ಯವನ್ನ ಅರಿಯುವಂತೆ ಮಾಡಬೇಕು, ಅಂಕಗಳನ್ನ ಕಡಿಮೆ ಪಡೆದರೂ ಬದುಕಿನ ಮೌಲ್ಯ ಕಡಿಮೆಯಾಗದಂತೆ ನೋಡಿಕೊಳ್ಳಿ, ಪಾಲಕರು ಮಕ್ಕಳ ಪ್ರತಿಭೆಗೆ ಅವಕಾಶವನ್ನ ನೀಡುವ ನಿಟ್ಟಿನಲ್ಲಿ ಪ್ರೋತ್ಸಾಹ ಪೂರಕ ವಸ್ತು ಪ್ರದರ್ಶನವನ್ನ ಮಕ್ಕಳು ಅದ್ಭುತ ರೀತಿಯಲ್ಲಿ ಮಾಡಿದ್ದಾರೆ ಎಂದರು. ಮಕ್ಕಳು ಚನ್ನಾಗಿ ಶಿಕ್ಷಣ ಹಾಗೂ ಉತ್ತಮ ರೀತಿಯಲ್ಕಿ ಬೆಳೆಯಬೇಕು ಎಂಬುದು ಎಲ್ಲ ಪಾಲಕರ ಆಶಯವಾಗಿರುತ್ತದೆ ಆ ನಿಟ್ಟಿನಲ್ಲಿ ಮಕ್ಕಳ ಪಾಲಕರನ್ನ ಇಲ್ಲಿ ಕರೆದು ತೋರಿಸುವ ಕಾರ್ಯ ಇರುತ್ತದೆ, ಪಾಲಕರು ಮಕ್ಕಳನ್ನ ಎಂದಿಗೂ ಹಿಂದೆ ಸರಿಯುವಂತೆ ಪ್ರೋತ್ಸಾಹಿಸಬಾರದು ಎಲ್ಲರಿಗೂ ಒಂದು ಪ್ರತಿಭೆ ಇರುತ್ತದೆ ಅದನ್ನ ಹೊರ ಹೊಮ್ಮಿಸಬೇಕು, ಅದಕ್ಕೆ ಅವಕಾಶವನ್ನ ಶಿಕ್ಷಣ ಸಂಸ್ಥೆಗಳು ನೀಡುತ್ತವೆ ಅದನ್ನ ಈ ಪೀನೀಕ್ಸ್ ಶಿಕ್ಷಣ ಸಂಸ್ಥೆ ಮಾಡಿದೆ ಎಂದರು. ಸಂಸ್ಥೆ ಅದ್ಯಕ್ಷ ಡಾ. ಮೃತ್ಯುಂಜಯ ತಿರ್ಲಾಪೂರ ಅದ್ಯಕ್ಷತೆವಹಿಸಿ ಮಾತನಾಡಿ ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಅಲ್ಲದೇ ಪಾಲಕರ ಪಾತ್ರವೂ ಬಹಳಷ್ಟಿದೆ ಎಂಬುದನ್ನ ಪಾಲಕರು ಅರಿತುಕೊಳ್ಳಬೇಕು, ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಕೈ ಒಂದು ಜೊತೆಗೆ ಪಾಲಕರ ಕೈ ಒಂದು ಸೇರಿದಾಗ ಚಪ್ಪಾಳೆಯಾಗಲು ಸಾದ್ಯವಿದೆ, ಪಾಲಕರ ಜವಾಬ್ದಾರಿ ಏನು ಎಂಬುದನ್ನ ಅರಿತರೆ ಮಕ್ಕಳ ಬೆಳವಣಿಗೆಯಲ್ಲಿ ಸಂಸ್ಕಾರಯುತ ಶಿಕ್ಷಣ ನೀಡಲು ಸಾದ್ಯವಿದೆ ಎಂದರು. ಈ ಸಂದರ್ಭದಲ್ಲಿ ಉಪಾದ್ಯಕ್ಷ ನರಹರಿ ಕಟ್ಟಿ, ಕಾರ್ಯದರ್ಶಿ ಡಾ. ರಾಣಿ ಎಂ ತಿರ್ಲಾಪೂರ, ಮುಖಂಡ ಶಿವಾನಂದ ಮ್ಯಾಗೇರಿ, ನಿರ್ದೇಶಕರಾದ ಸಿದ್ದನಗೌಡ ಪಾಟೀಲ, ಸುಮಿತ್ರಾ ಪಾಟೀಲ, ಲಕ್ಷ್ಮೀಬಾಯಿ ಕಟ್ಟಿ, ಪ್ರಾಚಾರ್ಯ ಶ್ರೀನಿವಾಸ ಮಡ್ಡಿ, ಉಪಪ್ರಾಚಾರ್ಯ ಹನುಮಂತ ಗೊರವರ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪಾಲಕರು ಇದ್ದರು.