ವಚನ ಸಾಹಿತ್ಯ-ದಾಸ ಸಾಹಿತ್ಯದ ಮೌಲ್ಯಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಕೆ.ಪಿ.ಪುತ್ತೂರಾಯ
ರಾಣೇಬೆನ್ನೂರು 05: ವಚನ ಸಾಹಿತ್ಯ-ದಾಸ ಸಾಹಿತ್ಯದ ಮೌಲ್ಯಗಳು ಅಂದಿಗೂ ಇಂದಿಗೂ ಮುಂದೆಯೂ ಸರ್ವಕಾಲಿಕ ಸತ್ಯಗಳಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಖ್ಯಾತ ವಾಗ್ಮಿಗಳು, ಸಾಹಿತಿಗಳು, ವೈದ್ಯಕೀಯ ಕಾಲೇಜು ವಿಶ್ರಾಂತ ಉಪನ್ಯಾಸಕರೂ ಆದ ಡಾ. ಕೆ.ಪಿ.ಪುತ್ತೂರಾಯ ಹೇಳಿದರು.
ಅವರು ನಗರದ ಕರ್ನಾಟಕ ಸಂಘದಲ್ಲಿ ಗುರುವಾರ 88ನೇಯ ವರ್ಷದ ನಾಡಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ಎಲ್ಲ ಭಾಷೆಗಳನ್ನು ಪ್ರೀತಿಸೋಣ ಜೊತೆಗೆ ಕನ್ನಡ ಭಾಷೆಯನ್ನು ಆರಾಧಿಸೋಣ ಎಂದ ಅವರು ದಾಸರು ಮತ್ತು ವಚನಕಾರರ ಬಗ್ಗೆ ವಿವರಿಸಿ ಸಮಾಜದ ಸ್ವಾಸ್ತ್ಯ ಕಾಪಾಡಲು ಅವರ ಸಾಹಿತ್ಯಗಳು ಹೇಗೆ ಕಾರ್ಯನಿರ್ವಹಿಸಿದ್ದವು ಎಂಬುದನ್ನು ತಿಳಿಸಿದರು.
ಕೆ.ಪಿ.ಪುತ್ತೂರಾಯ ಅತಿಥಿಯಾಗಿ ಆಗಮಿಸಿದ್ದ ಶಾಸಕ ಪ್ರಕಾಶ ಕೆ. ಕೋಳಿವಾಡ ಮಾತನಾಡಿ ರಾಣೇಬೆನ್ನೂರು ತಾಲೂಕಿಗೆ ವಿವಿಧ ಉದ್ಯಮಿಗಳನ್ನು ಅಹ್ವಾನಿಸಿದ್ದೇನೆ ಅವರು ಪ್ರಾರಂಭಿಸುವ ಸಂಸ್ಥೆಗಳಲ್ಲಿ ಶೇ75ರಷ್ಟು ರಾಣೇಬೆನ್ನೂರು ತಾಲೂಕಿನವರಿಗೆ ಕೆಲಸ ನೀಡಲು ಸಿದ್ದರಿದ್ದಾರೆ ತಾಲೂಕಿನ ಯುವಜನರಿಗೆ ಪ್ರಯೋಜನವಾಗಲಿದೆ ಎಂದರು.
ವೇದಿಕೆಯಲ್ಲಿ ಕೆ.ವಿ.ಜಿ.ಬ್ಯಾಂಕ್ ಪ್ರಬಂಧಕ ಶಂಕರಬಾಬು ಬಿಲ್ಲೂರ ಅತಿಥಿಯಾಗಿ ಆಗಮಿಸಿದ್ದರು ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ಕರ್ನಾಟಕ ಸಂಘದ ಹಿತೈಷಿಗಳು ಪೋಷಕರಾದ ವಸಂತ ನಾಡಿಗೇರ, ಉಮಾ ಐರಣಿ, ಜೆ.ಎಂ.ಮಠದ ಹಾಗೂ ನೀಲಕಂಠ ಭೂತೆ ಅವರಿಗೆ ಶ್ರದ್ಧಂಜಲಿ ಸಲ್ಲಿಸಲಾಯಿತು.
ವಿಭಾ ವಿನಾಯಕ ಜೋಷಿ ನಾಡಗೀತೆ ಹಾಡಿದರು, ಅರವಿಂದ ಐರಣಿ ಸ್ವಾಗತಿಸಿದರು, ಶ್ರೀನಿಧಿ ಶಿರಹಟ್ಟಿ ವಂದಿಸಿದರು, ಡಾ. ಮೇಘನಾ ನಾಡಿಗೇರ ಕಾರ್ಯಕ್ರಮ ನಿರ್ವಹಿಸಿದರು.