ಯರಗಟ್ಟಿ

ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ: ಬಹಿಷ್ಕರಿಸಿದ ಸಮಾಜ

ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ: ಬಹಿಷ್ಕರಿಸಿದ ಸಮಾಜ

ಲೋಕದರ್ಶನ ವರದಿ 

 ಯರಗಟ್ಟಿ 01  ಪಟ್ಟಣದ  ತಹಶೀಲ್ದಾರ ಕಛೇರಿಯಲ್ಲಿ ಆಯೋಜಿಸಿದ್ದ ವಾಲ್ಮೀಕಿ  ಜಯಂತಿ ಪೂರ್ವಭಾವಿ ಸಭೆಯನ್ನು  ಬಹಿಷ್ಕರಿಸಿದ ವಾಲ್ಮೀಕಿ ಸಮಾಜದ ಮುಖಂಡರು ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

 ವಾಲ್ಮೀಕಿ ಸಮಾಜದ ಜನಸಂಖ್ಯೆಗೆ ಆಧಾರಿತವಾಗಿ ಪ್ರತಿಶತ 4ರಿಂದ 7.5 ಪ್ರತಿಶತವರೆಗೆ  ಸರಕಾರ ಮೀಸಲಾತಿ ಹೆಚ್ಚಿಸಬೇಕೆಂದು ವಾಲ್ಮೀಕಿ  ಗುರು ಪೀಠದ  ರಾಜನಹಳ್ಳಿ  ಪ್ರಸಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ 2010ರಿಂದ ಸಮಾಜಕ್ಕೆ ದೊರೆಯುವ ಶಿಕ್ಷಣ, ಉದ್ಯೋಗ, ರಾಜಕೀಯ, ಸರಕಾರದ ಹಲವಾರು ಸೌಲಭ್ಯಗಳಿಂದ ವಂಚಿತವಾಗಿದ್ದರಿಂದ 2022ವರೆಗೆ  ಹೋರಾಟ ಮಾಡಿದರೂ ಯಾವ ಪ್ರಯೋಜನವಾಗಿಲ್ಲ. ಕಳೆದ ಮೂರು ತಿಂಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಸ್ವಾಮೀಜಿಗಳಿಗೆ ಪ್ರತಿ ಗ್ರಾಮದಿಂದ ವಾಲ್ಮೀಕಿ ಜಯಂತಿ ಬಹಿಷ್ಕರಿಸಿ ಯರಗಟ್ಟಿ ತಾಲೂಕಿನ ಎಲ್ಲ ಗ್ರಾಮದಿಂದ  ವಾಲ್ಮೀಕಿ ಸಮಾಜದ 10  ಜನ ಸದಸ್ಯರು  ಬೆಂಗಳೂರಿನ ಪ್ರಿಡಮ್ ಪಾರ್ಕಿನಲ್ಲಿ ಜರಗುವ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕೆಂದು  ಯರಗಟ್ಟಿ  ತಾಲೂಕಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಎಸ್ ಎಚ್ ನಾಯ್ಕರ ಹೇಳಿದರು.  

ಅವರು ಯರಗಟ್ಟಿ ತಹಶೀಲ್ದಾರ ಕಛೇರಿಯಲ್ಲಿ ವಾಲ್ಮೀಕಿ ಜಯಂತಿಯ ಪೂರ್ವಬಾವಿ ಸಭೆ ಬಹಿಷ್ಕರಿಸುವ ಮೂಲಕ ಪ್ರತಿಭಟಿಸಿ , ತಹಶೀಲ್ದಾರ ಮಹಾಂತೇಶ ಮಠದ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. 

ವಾಲ್ಮೀಕಿ ಸಮಾಜದ ಮುಖಂಡರಾದ ಬಾಬಣ್ಣಾ ತಳವಾರ, ಬಾಳೇಶ ಅಜ್ಜನಕಟ್ಟಿ, ಮಹಾದೇವ ದೊಡಲಿಂಗನವರ,  ಹೊನ್ನಪ್ಪ ಖಂಡ್ರಿ, ಫಕೀರ​‍್ಪ ನಡುವಿನ, ಶೇಖರ ಗುರುಗೋಳ,ಸಿದ್ದಪ್ಪ ಮಾಳಗಿ, ಪ್ರಕಾಶ ಲಿಂಗರಡ್ಡಿ, ತಮ್ಮನ ಸೊನ್ನದ, ಚಂದ್ರು ಅಳಗೋಡಿ, ಈರ​‍್ಪ ಚಿಕ್ಕಾಕಿ, ಅಶೋಕ ನಾಯ್ಕರ, ವಿಷ್ಣು ಮಾಡಮಗೇರಿ, ಸಿದ್ದಾರೂಢ ಮಾದನ್ನವರ, ಹೇಮಂತ ಗೋಪಾಳಿ, ಶಶಿಧರ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ