ಕೊರೋನಾ ನಿರ್ಮೂಲನೆಗೆ ಲಸಿಕೆ ಅಗತ್ಯ
ಗುಳೇದಗುಡ್ಡ,06: ಕೋರೋನಾದಿಂದ ನಾವು ಸುರಕ್ಷಿತವಾಗಿರಬೇಕಾದರೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋರೋನಾ ನಿರ್ಮೂಲನೆ ಮಾಡಬೇಕಾದ ಅಗತ್ಯ ಇದೆ ಎಂದು ಜಗದ್ಗುರು ಗುರುಸಿದ್ದೇಶ್ವ ಮಹಿಳಾ ಬಿ.ಇಡಿ ಕಾಲೇಜ್ ಪ್ರಾಚಾರ್ಯೆ ಡಾ.ಪಿ.ಆಯ್.ಮೋಮಿನ್ ಹೇಳಿದರು.
ಮಂಗಳವಾರ ಪಟ್ಟಣದ ಜಗದ್ಗುರು ಗುರುಸಿದ್ದೇಶ್ವ ಮಹಿಳಾ ಬಿ.ಇಡಿ ಕಾಲೇಜಿನಲ್ಲಿ ತಾಲೂಕು ಆರೋಗ್ಯ ಇಲಾಖೆ, ರಾಷ್ಟೀಯ ಲಸಿಕಾ ಅಭಿಯಾನ ಅಡಿಯಲ್ಲಿ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳಿಗಾಗಿ ಕೋವಿಡ್-19 ಉಚಿತ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಅಗಷ್ಟ್ ನಂತರ ಆಫ್ಲೈನ್ ಕ್ಲಾಸುಗಳು ಆರಂಭವಾಗುವುದರಿಂದ ಬಿ.ಇಡಿ ವಿದ್ಯಾರ್ಥಿನಿಯರಿಗೆ ಲಸಿಕೆ ಹಾಕಿಸಲಾಯಿತು. ಇದರಿಂದ ಕೊರೋನಾ ಅಲೆಯಿಂದ ಆಗುವ ಹಾನಿಯನ್ನು ತಡೆಯಬಹುದು ಮತ್ತು ರೋಗ ನಿಯಂತ್ರಣ ಮಾಡಲು ಲಸಿಕೆಯಿಂದ ಸಾಧ್ಯವಾಗುತ್ತದೆ ಎಂದರು. ನಂತರ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಲಸಿಕೆ ಹಾಕಲಾಯಿತು.
ತಾಲೂಕು ಆರೋಗ್ಯ ತಂಡದ ಪ್ರೀತಿ ಬೆಳಗಲ್, ಎಂ.ಪಿ.ಪಾಗದ, ಜಯಶ್ರೀ ಕಳಸಾ, ಆರ್.ಎಂ.ಸಾಳಗುಂದಿ, ಶಿವು ಗಾಣಿಗೇರ, ಕಾಲೇಜ್ ಸಿಬ್ಬಂದಿ ಎಸ್.ಟಿ.ಕತ್ತಿ, ಬಿ.ಎ.ನದಾಫ್, ವಿ.ಕೆ.ಬದಿ, ಎಸ್.ಸಿ.ಗದ್ದಿಗೌಡರ್, ಸಂತೋಷ್, ಗೀತಾ ಸಾತನೂರ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.