ಕಾಗವಾಡ

709 ಕೊರೋನಾ ವಾರಿಯರ್ಸ್‍ಗಳಿಗೆ ಲಸಿಕೆ

709 ಕೊರೋನಾ ವಾರಿಯರ್ಸ್‍ಗಳಿಗೆ ಲಸಿಕೆ

ಕಾಗವಾಡ 21: ಕಾಗವಾಡ ಮತ್ತು ಅಥಣಿ ತಾಲೂಕಿನ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 709 ಕೊರೋನಾ ವಾರಿಯರ್ಸ್‍ಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಜರುಗಿತು.

ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ಬಸಗೌಡಾ ಕಾಗೆ ತಿಳಿಸಿದರು.

ಉಗಾರ ಖುರ್ದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ವಾರಿಯರ್ಸ್‍ರಿಗೆ ಲಸಿಕೆ ನೀಡುವ ಕಾರ್ಯಕ್ರಮ ನೆರವೇರಿತು. ಮುಖ್ಯ ಅತಿಥಿಗಳಾಗಿ ಡಾ. ಬಸಗೌಡಾ ಕಾಗೆ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಉಗಾರ ಪುರಸಭೆ ಅಧ್ಯಕ್ಷ ಮಂಜುನಾಥ ತೇರದಾಳೆ ಅಧ್ಯಕ್ಷತೆ ವಹಿಸಿದ್ದರು. 

ಉಗಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ವೀಣಾ ಲೋಕುರ ಲಸಿಕೆ ನೀಡುವ ವ್ಯವಸ್ಥೆ ಮಾಡಿದರು. ಪುರಸಭೆ ಉಪಾಧ್ಯಕ್ಷ ಪರಸಪ್ಪಾ ನಾಯಿಕ, ಸದಸ್ಯರಾದ ನಂದಿನಿ ಫರಾಕಟ್ಟೆ, ಪ್ರಫುಲ್ ಥೋರುಶೆ, ವಿಜಯ ಆಸೂದೆ, ಡಾ. ಹಿರೇಮಠ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ವೀಣಾ ಲೋಕುರ(ಉಗಾರ), ಡಾ. ಪುಷ್ಪಲತಾ ಸುನ್ನದಕಲ್ಲ(ಕಾಗವಾಡ), ಡಾ. ಸೌಮ್ಯಾ ಪಾಟೀಲ(ಶಿರಗುಪ್ಪಿ), ಡಾ. ಕಿರಣಕುಮಾರ(ಮಂಗಸೂಳಿ), ಡಾ. ಅನುಪ ಕಾಂಬಳೆ(ಮೋಳೆ), ಡಾ. ಅನುಪ ಗಸ್ತಿ(ಸತ್ತಿ), ಡಾ. ಸುಧಾರಾಣಿ ಸಂಕ್ರಟ್ಟಿ, ಡಾ. ರಾಚಿಗೌಡ(ನದಿ ಇಂಗಳಗಾಂವ), ಡಾ. ಸಿ.ಎಸ್.ಪಾಟೀಲ(ಅಥಣಿ) ಇವರೊಂದಿಗೆ ಸಿಬ್ಬಂದಿಗಳು ವಿಶೇಷ ಸಹಕರಿಸಿದ್ದಾರೆ ಎಂದು ಆರೋಗ್ಯಾಧಿಕಾರಿ ಡಾ. ಬಸಗೌಡಾ ಕಾಗೆ ತಿಳಿಸಿದರು.

ಸುದ್ದಿ ಓದಿ