ಕೋ ವ್ಯಾಕ್ಸಿನ್ ಪಡೆದು ಕೊರೊನಾ ತೊಲಗಿಸಿ; ಸವದಿ
ಅಥಣಿ 17: ಕೋರೊನಾ ಮಹಾಮಾರಿ ತಡೆಗಟ್ಟಲು ಆರೋಗ್ಯ ಇಲಾಖೆ ನೀಡುತ್ತಿರುವ ಕೋ ವ್ಯಾಕ್ಸಿನ್ನ್ನು ಡಿಸಿಎಂ ಲಕ್ಷ್ಮಣ್ ಸವದಿ ಬೆಂಗಳೂರು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪಡೆದುಕೊಂಡು ಇತರರು ಪಡೆಯುವಂತೆ ಮನವಿ ಮಾಡಿಕೊಂಡರು.
ಪ್ರಪಂಚದಲ್ಲಿ ಭಾರತ ಕೊರೊನಾ ವೈರಸ್ ತಡೆಗಟ್ಟಲು ಒಂದು ಕ್ರಾಂತಿಕಾರಿ ಹೆಜ್ಜೆ ಇಡುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಮಾರ್ಗ ಸೂಚಿಯ ಪ್ರಕಾರ ಎಲ್ಲರೂ ಕೋ ವ್ಯಾಕ್ಸಿನ್ ಪಡೆದುಕೊಳ್ಳಿ ಹಾಗೂ ನಿನ್ನೆ ಅಷ್ಟೇ ರಾಜ್ಯ ಮುಖ್ಯಮಂತ್ರಿ ಬಿ, ಎಸ್ ಯಡಿಯೂರಪ್ಪನವರು ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನವರು ಕೊ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಇದರಲ್ಲಿ ಭಯಪಡುವ ಅಗತ್ಯವಿಲ್ಲ, ಕೆಲವರು ಗಾಳಿ ಸುದ್ದಿ ಹೊರಡಿಸಿ ತಪ್ಪು ಸಂದೇಶ ಸಾರುತಿದ್ದಾರೆ. ಜನರು ಗೊಂದಲ ಮಾತುಗಳಿಗೆ ಕಿವಿಗೊಡಬೇಡಿ. ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ ಎಂದು ಕರೆ ನೀಡಿದರು.
ಕೆಲವು ರಾಜ್ಯದಲ್ಲಿ ಎರಡನೇ ಅಲೆಯಾಗಿ ಕೋರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದ ಜನರು ಆರೋಗ್ಯದ ಕಡೆ ಗಮನವಿರಲಿ, ಸಾಮಾಜಿಕ ಅಂತರ ಮಾಸ್ಕ್ ಧರಿಸುವುದನ್ನು ಮರೆಯಬೇಡಿ ಎಂದು ಸಲಹೆ ನೀಡಿದರು.