ವಿಬಿಜಿ ರಾಮ್ ಜಿ ಯೋಜನೆ: ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ಸೂಚನೆ
ಕಾರವಾರ .09:- ವಿಬಿಜಿ ರಾಮ್ ಜಿ ಯೋಜನೆಯಡಿ ಕಡಿಮೆ ಪ್ರಗತಿಯಿರುವ ಗ್ರಾಮ ಪಂಚಾಯತ್‌ಗಳು ಪ್ರಗತಿ ಸಾಧಿಸುವಂತೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಕರೀಂ ಅಸಾದಿ ಸೂಚನೆ ನೀಡಿದರು. ಅವರು ಶುಕ್ರವಾರ ಶಿರಸಿ ತಾಲೂಕು ಪಂಚಾಯತ್ ಕಚೇರಿಗೆ ಭೇಟಿ ನೀಡಿ ಪ್ರಗತಿ ಪರೀಶೀಲನಾ ಸಭೆ ನಡೆಸಿ ಮಾತನಾಡಿದರು.
ವಿಬಿಜಿ ರಾಮ್ ಜಿ ಯೋಜನೆಯಡಿ ಮಾನವ ದಿನಗಳ ಪ್ರಗತಿಯಾಗಬೇಕು. ಕೂಲಿಕಾರರ ಎನ್‌ಎನ್‌ಎಂಎಸ್ ಫೋಟೋ ಕಡ್ಡಾಯವಾಗಿ ಮಾಡಬೇಕು. ಜೀವನೋಪಾಯ ವಿಭಾಗದಡಿ ಸಂಜೀವಿನಿ ಒಕ್ಕೂಟದ ಸದಸ್ಯರ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಳ್ಳುವಂತೆ ಸೂಚನೆ ನೀಡಿ, ಅಕ್ಕ ಕೆಫೇ ಕಾಮಗಾರಿಯನ್ನು ಪರೀಶೀಸಿದರು.
ನಂತರ ಯಡಳ್ಳಿ ಗ್ರಾಮ ಪಂಚಾಯತ್ ಕ್ಕೆ ಭೇಟಿ ನೀಡಿ ವಿಬಿಜಿ ರಾಮ್ ಜಿ ಯೋಜನೆಗೆ ಸಂಬಂಧಿಸಿದ ದಾಖಲೆಗಳು, ವಹಿಗಳು, ಕ್ಯಾಶ್ಬುಕ್,ಠರಾವು ವಹಿಗಳನ್ನು ಪರೀಶೀಲಿಸಿ ಮಾನವ ದಿನಗಳ ಸೃಜನೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಪ್ರಗತಿ ಸಾಧಿಸಬೇಕು ಎಂದ ಅವರು, ಹಾಜರಾತಿ, ಚಲನವಲನ ವಹಿಗಳು, ಐಪಿಜಿ ಆರ್‌ಎಸ್ ಅರ್ಜಿ ದಾಖಲೆ, ಕುಡಿಯುವ ನೀರಿನ ವ್ಯವಸ್ಥೆ ಕುರಿತು ದಾಖಲೆಗಳನ್ನು ನಿರ್ವಹಿಸುವಂತೆ ಸಲಹೆ ನೀಡಿದರು.
ನಂತರ ಸಾರ್ವಜನಿಕರ ಮಾಹಿತಿಗಾಗಿ ಕಚೇರಿಯಲ್ಲಿ ಅಳವಡಿಸಿದ ನಾಮಫಲಕಗಳನ್ನು ಮತ್ತು ಗ್ರಂಥಾಲಯ ನಿರ್ವಹಣೆ ಹಾಗೂ ಎನ್‌ಆರ್‌ಎಲ್‌ಎಂ ಒಕ್ಕೂಟ ವಿಭಾಗದ ಕಾರ್ಯವೈಖರಿಯನ್ನು ಪರೀಶೀಲಿಸಿದರು. ಯಡಳ್ಳಿ ಅಂಗನವಾಡಿ ಕೇಂದ್ರ ಭೇಟಿ ನೀಡಿ ಮಕ್ಕಳ ಹಾಜರಾತಿ, ಆಹಾರ ಧಾನ್ಯಗಳು ಹಾಗೂ ಆಹಾರ ತಯಾರಿಕೆ,
ಕುಡಿಯುವ ನೀರಿನ ಶುದ್ಧತೆ ಕುರಿತು ಮಾಹಿತಿ ಪಡೆದು ಜಾಗೃತಿ ವಹಿಸುವಂತೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಿಬಿಜಿ ರಾಮ್ ಜಿ ಯೋಜನೆಯ ಸಿಬ್ಬಂದಿಗಳು ಹಾಜರಿದ್ದರು.