ಉತ್ತರ ಕನ್ನಡ ಜಿಪಿಂ-ತಾಪಂ ಮೀಸಲಾತಿ ಪ್ರಕಟ
ಕಾರವಾರ 11: ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಲ್ಲಿ ಚರ್ಚೆ, ವಿಚಾರ ವಿನಿಮಯ ಆರಂಭವಾಗಿದೆ.ಉತ್ತರ ಕನ್ನಡ ಪಂಚಾಯತ್ನ 53 ಹಾಗೂ 12 ತಾಲೂಕು ಪಂಚಾಯತ್ಗಳ 118 ಕ್ಷೇತ್ರಗಳ ಮೀಸಲಾತಿ ಪ್ರಕಟವಾಗಿದ್ದು,ಕಳೆದ 5: ವರ್ಷಗಳಿಂದ ಚುನಾವಣೆಗಾಗಿ ಕಾಯುತ್ತಿದ್ದ ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಯಾಗುವ ಆಕಾಂಕ್ಷಿಗಳಲ್ಲಿ ಹುಮ್ಮಸು ಆರಂಭವಾಗಿದೆ.
ಉ.ಕ.ಜಿಲ್ಲೆಯ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಮೀಸಲಾತಿ ನಿಗದಿಪಡಿಸಿ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಮೀಸಲಾತಿ ಕುರಿತು ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 19ರ ಸಂಜೆ 5 ಗಂಟೆಯವರೆಗೆ ಅವಕಾಶ ನೀಡಲಾಗಿದ್ದು, ಆಕ್ಷೇಪಣೆಗಳ ಪರೀಶೀಲನೆಯ ಬಳಿಕ ಕ್ಷೇತ್ರಗಳ ಮೀಸಲಾತಿ ಅಂತಿಮಗೊಳ್ಳಲಿದೆ. ಈಗ ರಾಜ್ಯ ಗೆಝೆಟ್ ನಲ್ಲಿ ಪ್ರಕಟಿತ ಮೀಸಲಾತಿ ಆಧರಿಸಿ ಚುನಾವಣಾ ಸಿದ್ಧತೆ ಆರಂಭಿಸಲು ಎಲ್ಲಾ ಪಕ್ಷಗಳ ರಾಜಕೀಯ ವಲಯದಲ್ಲಿ ಚಟುವಟಿಕೆ ಆರಂಭವಾಗಿದೆ.