ಕೊರೋನಾ ಗೆಲ್ಲಲು ಆರೋಗ್ಯ ಕಿಟ್ ಬಳಸಿ
ಗುಳೇದಗುಡ್ಡ: ಸರಿಯಾದ ಆರೋಗ್ಯದ ಕಾಳಜಿ ಇದ್ದವರಿಗೆ ಕೊರೋನಾ ಸಮೀಪಕ್ಕೂ ಬಾರದು. ಆತ್ಮಸ್ಥೈರ್ಯದಿಂದ ರೋಗವನ್ನು ಗೆಲ್ಲಬೇಕು. ರೋಗ ನಿರೋಧಕ ಶಕ್ಕಿ ಹೆಚ್ಚಳಕ್ಕೆ ಆರೋಗ್ಯ ಕಿಟ್ ಬಳಸಿ ಎಂದು ಜಮ್ಮನಕಟ್ಟಿ ಗ್ರಾಮದ ಆಯುಷ್ಯ ವೈದ್ಯಾಧಿಕಾರಿ ಡಾ.ಅಕ್ಕಮಹಾದೇವಿ ಗಾಣಿಗೇರ ಹೇಳಿದರು. ಅವರು ಶನಿವಾರ ತಾಲೂಕಿನ ಜಮ್ಮನಕಟ್ಟಿ ಗ್ರಾಮದ ಶಿಕ್ಷಕರಿಗೆ, ಅಂಗನವಾಡಿ ಹಾಗೂ ಆಶಾ ಕಾರ್ಯಕತರ್ೆಯರಿಗೆ ಸಾರ್ವಜನಿಕರಿಗೆ ಮತ್ತು ಕೊರೋನಾ ವಾರಿಯಸರ್್ಗಳಿಗೆ ರೋಗ ಪ್ರತಿರೋಧಕ, ಶಕ್ತಿವರ್ಧಕ ಆಯುಷ್ಯ ಕೊರೋನಾ ಕಿಟ್ಗಳನ್ನು ಹಾಗೂ ಮಾಸ್ಕ್ಗಳನ್ನು ಆಯುಷ್ಯ ಇಲಾಖಾ ವತಿಯಿಂದ ಸಹ ವಿತರಿಸಿ ಮಾತನಾಡಿ, ಕೊರೋನಾ ಸೋಂಕು ನಿಯಂತ್ರಿಸಲು ಎಲ್ಲರಲ್ಲಿ ರೋಗನಿರೋಧಕ ಶಕ್ತಿ ಅಗತ್ಯವಾಗಿದೆ. ಅದನ್ನು ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮವಾಗಿ ಆಯುಷ್ಯ ಇಲಾಖೆಯಿಂದ ಸಕರ್ಾರ ಕೊಡಮಾಡಿದ ಮಾತ್ರೆ ಹಾಗೂ ಅರಾಕ್ ಅಜೀಬ್ ಲಿಕ್ವಿಡ್ ಬಳಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಬಳಸುವುದು, ಕಷಾಯ ಸೇವನೆ ಮಾಡುವುದು ಅಗತ್ಯವಾಗಿದೆ. ಕೊರೋನಾ ಬಗ್ಗೆ ಅಸಡ್ಡೆ ತೋರದೇ ಮುಂಜಾಗ್ರತಾ ಕ್ರಮ ಅನುಸರಿಸುವುದು, ಸಕರ್ಾರದ ಕೋವಿಡ್ ನಿಯಮಗಳನ್ನು ಹಾಗೂ ಆರೋಗ್ಯದ ನಿಯಮಗಳನ್ನು ಪಾಲಿಸುವುದು ಅವಶ್ಯ ಎಂದರು. ಗ್ರಾಪಂ ಅಧ್ಯಕ್ಷ ಅನೀಲ ಯಂಕಪ್ಪ ಹೊಸಗೌಡ್ರ, ಉಪಧ್ಯಕ್ಷೆ ಮುತ್ತವ್ವ ಶಿವಶಂಕರ ವಾಲ್ಮೀಕಿ ಮತ್ತು ಸದಸ್ಯರು, ಬಾದಾಮಿ ಸಮಾಜ ಕಲ್ಯಾಣ ಇಲಾಖೆಯ ಭವಾನಿ ಪಾಟೀಲ, ಅಂಗನವಾಡಿ ಹಾಗೂ ಆಶಾ ಕಾರ್ಯಕತರ್ೆಯರು ಪಿಡಿಓ ಕುಂಬಾರ ಸೇರಿದಂತೆ ಇತರರು ಇದ್ದರು.- ತಾಲೂಕಿನ ಜಮ್ಮನಕಟ್ಟಿ ಗ್ರಾಮದಲ್ಲಿ ಆಯುಷ್ಯ ಇಲಾಖೆಯಿಂದ ಆರೋಗ್ಯಕಿಟ್ ವಿತರಿಸಲಾಯಿತು