ಐಷೋಲೇಷನ್ ಕಿಟ್ ಬಳಸಿ: ಶೆಟ್ಟರ್
ಗುಳೇದಗುಡ್ಡ25: ಕೋವಿಡ್ ಸೋಂಕು ತಗುಲದಂತೆ ಮುಂಜಾಗ್ರತಾ ಕ್ರಮಕೈಗೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದರಲ್ಲಿಯೂ ಪೌರಕಾರ್ಮಿಕರು ಹಾಗೂ ಸಿಬ್ಬಂದಿಗಳು ಸೋಂಕು ತಗುಲದಂತೆ ಎಚ್ಚರಿಕೆವಹಿಸುವುದು ಅಗತ್ಯವಾಗಿದೆ. ಸಹೋದರಿ ವೀಣಾ ಕಾಶಪ್ಪನವರ್ ಕೊಡಮಾಡಿದ ಐಷೋಲೇಷನ್ ಕಿಟ್ ಬಳಸಿ ಆರೋಗ್ಯವಂತರಾಗಿರಿ ಎಂದು ಇಲ್ಲಿನ ಕಾಂಗ್ರೇಸ್ ಮುಖಂಡ ಹೊಳಬಸು ಶೆಟ್ಟರ್ ಹೇಳಿದರು.
ಪುರಸಭೆಯಲ್ಲಿ ಗುರುವಾರ ಪೌರ ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಐಷೋಲೇಷನ್ ಕಿಟ್ ವಿತರಿಸಿ ಮಾತನಾಡಿದರು.
ಸಹೋದರಿ ಮಾಜಿ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಜಿಲ್ಲೆಯಲ್ಲಿ ಎಲ್ಲ ಕಡೆ ಓಷಧ ಕಿಟ್ ವಿತರಿಸಿದ್ದಾರೆ. ಅದರಂತೆ ಗುಳೇದಗುಡ್ಡ ಪುರಸಭೆ ಸಿಬ್ಬಂದಿಗಳಿಗೂ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಅವರೇ ವಿತರಿಸಲು ಬರಬೇಕಾಗಿತ್ತು. ಅನಿವಾರ್ಯ ಕಾರಣದಿಂದ ಬರಲಿಕ್ಕಾಗದ ಕಾರಣ ನಾವು ವಿತರಿಸುತ್ತಿದ್ದೇವೆ. ಕೋವಿಡ್ ಸೋಂಕು ತಗುಲದಂತೆ ಈ ಓಷದ ಬಳಸಿ ಆರೋಗ್ಯವಂತರಾಗಿರಿ ಎಂದು ಹೇಳಿದರು.
ಪುರಸಭೆಗೆ ಸ್ಯಾನಿಟೈಜರ್ ಅಟೋಮಶೀನ್ ವಿತರಿಸಿದರು. ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ, ಉಪಾಧ್ಯಕ್ಷೆ ಶರೀಫಾ ಮಂಗಳೂರ, ಮುಖ್ಯಾಧಿಕಾರಿ ಚಿದಾನಂದ ಮಠಪತಿ, ಕಾಂಗ್ರೇಸ್ ಮುಖಂಡ ಸಂಜಯ ಬರಗುಂಡಿ, ಮಾಜಿ ಅಧ್ಯಕ್ಷ ವೈ.ಆರ್.ಹೆಬ್ಬಳ್ಳಿ, ಮಾಜಿ ಉಪಾಧ್ಯಕ್ಷ ಪ್ರಕಾಶ ಮುರಗೋಡ, ಜುಗಲ್ಕಿಶೋರ ಭಟ್ಟಡ್, ಶಿವನಯ್ಯ ಮಳಿಮಠ, ಪುರಸಭೆ ಸದಸ್ಯರಾದ ವಿನೋದ ಮದ್ದಾನಿ, ರಫೀಕ್ ಕಲಬುರ್ಗಿ, ಯಲ್ಲಪ್ಪ ಮನ್ನಿಕಟ್ಟಿ, ಕಾಂಗ್ರೆಸ್ ಕಾರ್ಯಕರ್ತ ಹಣಮಂತ ಗೌಡರ್, ಚಂದ್ರು ಪಟ್ಟಣಶೆಟ್ಟಿ, ಸಾಗರ ಕೊಣ್ಣೂರ, ಪ್ರದೀಪ ಕಂಚಾಣಿ, ಪ್ರಕಾಶ ರೋಜಿ ಹಾಗೂ ಇತರರು ಇದ್ದರು.