ನಗರ ಅಭ್ಯಾಸ ವೇದಿಕೆ ಕಾರ್ಯಕ್ರಮ
ಲೋಕದರ್ಶನ ವರದಿ
ಕಾಗವಾಡ 25: ತಾಲುಕಿನ ಉಗಾರ ಖುರ್ದ ಪಟನದ ಪಿಪಲ್ ಎಜ್ಯಕೇಶನ್ ಸೊಸ್ಠಟಿ ಶಿಕ್ಷಣ ಸಂಸ್ಥೆಯ ಪಿಇಎಸ್ ಬಿಬಿಎ, ಬಿಕಾಂ ಮಹಾವಿದ್ಯಾಲಯ ಹಾಗೂ ಅಖೀಲ ಭಾರತ ವಿದ್ಯಾ ಪರಿಷತ್ ಕಾಗವಾಡ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ದಿ. 24ರಂದು 2021-22ನೇ ಸಾಲಿನ ನಗರ ಅಭ್ಯಾಸ ವೇದಿಕೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಎಬಿವಿಪಿ ಬೆಳಗಾವಿ ವಿಭಾಗದ ಸಹ ಸಂಚಾಲಕ ಮಲ್ಲಪ್ಪಾ ಮುಕುಂದ, ಪಿಪಲ್ ಎಜ್ಯಕೇಶನ್ ಸೊಸ್ಠಟಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಮಚಂದ್ರ ಕಿಲ್ಲೇದಾರ, ಚಿಕ್ಕೋಡಿ ಜಿಲ್ಲಾ ಪೋಷಕ ಸಮಿತಿಯ ಸದಸ್ಯರಾದ ಸದಾಶಿವ ಪೂಜಾರಿ, ಎಬಿವಿಪಿ ಚಿಕ್ಕೋಡಿ ಜಿಲ್ಲಾ ವಿಭಾಗದ ಸಹ ಸಂಚಾಲಕ ಪ್ರಸಾದ ಎಂ. ಪಾಲ್ಗೊಂಡಿದರು.
ಚಿಕ್ಕೋಡಿ ಜಿಲ್ಲಾ ಪೋಷಕ ಸಮಿತಿಯ ಸದಸ್ಯ ಸದಾಶಿವ ಪೂಜಾರಿ ಅವರು ಮಾತನಾಡಿ ಅಖೀಲ ಭಾರತ ವಿದ್ಯಾ ಪರಿಷತ್ನ ಕಾರ್ಯವೈಖರಿ, ಅದರ ಮಹತ್ವವನ್ನು ಸವಿಸ್ತಾರವಾಗಿ ಹೇಳಿದರು.
ಪಿಪಲ್ ಎಜ್ಯಕೇಶನ್ ಸೊಸ್ಠಟಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಮಚಂದ್ರ ಕಿಲ್ಲೇದಾರ ಅವರು ಮಾತನಾಡಿ ಇಂದಿನ ಯುವ ಸಮೂಹವು ಇಂತಹ ಸಂಘಗಳ ಮೂಲಕ ಮುನ್ನೆಲೆಗೆ ಬರಬೇಕು. ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಸಮಾಜಮೂಖಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಅದೇ ರೀತಿ ಕಾರ್ಯಕ್ರಮವು ಸೈದ್ಧಾಂತಿಕ ಭೂಮಿಕೆ, ಕ್ಯಾಂಪಸ್ ಕಾರ್ಯ ಮತ್ತು ನೆತೃತ್ವ, ನಮ್ಮ ಕಾರ್ಯ ಪದ್ಧತಿ ಈ ಹಂತಗಳ ಮೂಲಕ ಕಾರ್ಯಕಲಾಪಗಳನ್ನು ಎ.ಬಿ.ವಿ.ಪಿ ಸದಸ್ಯರು ನೆರವೇರಿಸಿದರು.
ಮಲ್ಲಪ್ಪಾ ಮುಕುಂದು ಇವರು ಉಗಾರದ ನೂತನ ಸದಸ್ಯರಿಗೆ 2021-22 ನೇ ಸಾಲಿನ ಜವಾಬ್ದಾರಿಗಳನ್ನು ಘೋಷಣೆ ಮಾಡಿದರು. ವಾಸುಪುಜ್ಯ ಮಗದುಮ್ಮ, ಚಿರಾಗ ಮಗದುಮ್ಮ, ಅಭಿಷೇಕ ಹಿರೇಕುಡಿ ವಿದ್ಯಾರ್ಥಿಗಳನ್ನು ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು. ಉಪನ್ಯಾಸಕ ರಾಜು ಧಡಧಡೆ ನಿರೂಪಿಸಿದರು.