ಅಥಣಿ

ಲಿಂ. ಮರುಳಸಿದ್ದ ಶಿವಯೋಗಿಗಳ ವೃತ್ತದ ನಾಮಫಲಕ ಅನಾವರಣ

ಲಿಂ. ಮರುಳಸಿದ್ದ ಶಿವಯೋಗಿಗಳ ವೃತ್ತದ ನಾಮಫಲಕ ಅನಾವರಣ
ಕಟಗೇರಿ ರಸ್ತೆಯ ಪಕ್ಕದಲ್ಲಿ ಲಿಂ.ಮರುಳಸಿದ್ದ ಶಿವಯೋಗಿಗಳ ವೃತ್ತವನ್ನು ಮೋಟಗಿಮಠದ ಸ್ವಾಮೀಜಿ ಅನಾವರಣಗೊಳಿಸಿದರು.

ಅಥಣಿ 20: ಪಟ್ಟಣದ ಹೊರವಲಯದ ಅಥಣಿ- ಕಟಗೇರಿ ರಸ್ತೆಯ ಪಕ್ಕದಲ್ಲಿ ಲಿಂ.ಮರುಳಸಿದ್ದ ಶಿವಯೋಗಗಳ ವೃತ್ತದ ನಾಮಕರಣ ಮಾಡಿ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ಶಟ್ಟರಮಠದ ಮರುಳಸಿದ್ದ ಸ್ವಾಮೀಜಿ ಅವರ ನೇತೃತ್ವದಲ್ಲಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.

ನಂತರ ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಮಾತನಾಡಿ ಲಿಂ.ಮರುಳಸಿದ್ದ ಶಿವಯೋಗಿಗಳು ಮೌನವಾಗಿಯೇ ಇದ್ದರೂ ಲಿಂಗಪೂಜಾನಿಷ್ಠರಾಗಿದ್ದರು.ಅವರು ಶಿವಶರಣರ ವಚನಗಳನ್ನು ಮನೆ ಮನಗಳಿಗೆ ಮುಟ್ಟುವಂತೆ ಕಾಯಕ ಮಾಡಿದವರು. ಅವರ ಸ್ಮರಣೆಯ ದಿನವೇ ಅವರ ಹೆಸರಿನಲ್ಲಿ ವೃತ್ತವನ್ನು ಮಾಡಬೇಕೆಂಬ ಸಂಕಲ್ಪವಿತ್ತು, ಅದು ಇಂದು ನೇರವೇರುತ್ತಿದೆ ಎಂದು ಹೇಳಿದರು.

ಈ ವೇಳೆ ಮುಖಂಡರಾದ ಸದಾಶಿವ ಬುಟಾಳಿ, ಶಿವಾನಂದ ದಿವಾನಮಳ, ಬಸವರಾಜ ಬುಟಾಳಿ, ಶ್ರೀಶೈಲ್ ಹಳ್ಳದಮಳ್ಳ, ಗಿರೀಶ ದಿವಾನಮಳ, ಈರನಗೌಡ ಪಾಟೀಲ, ಮಹಾದೇವ ಮಡಿವಾಳ, ಅಣ್ಣಾಸಾಬ ತೆಲಸಂಗ, ವಿವೇಕ ಮೇಣಸಿ ಇನ್ನೀತರರು ಉಪಸ್ಥಿತರಿದ್ದರು.

ಸುದ್ದಿ ಓದಿ