ಆ. 1ರಂದು ಬಸವೇಶ್ವರ ಅಶ್ವಾರೂಢ ಪುತ್ಥಳಿಯ ಅನಾವರಣ
ಕಾಗವಾಡ 27: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗವಾದ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಸೋಮವಾರ ದಿ.1 ರಂದು ಬೆಳಿಗ್ಗೆ 10 ಗಂಟೆಗೆ ವಿಜಯಪುರದ ಜ್ಞಾನ ಯೋಗಾಶ್ರಮದ ಪ.ಪೂಶ್ರೀ ಸಿದ್ದೇಶ್ವರ ಸ್ವಾಮಿಜಿಯವರ ಹಸ್ತದಿಂದ ಜಗಜ್ಯೋತಿ ಶ್ರೀ ಬಸವೇಶ್ವರ ಅಶ್ವಾರೂಢ ಪುಥ್ಥಳಿಯ ಅನಾವರಣ ಸಮಾರಂಭ ಜರುಗಲಿದೆ.
ಉಗಾರ ಖುರ್ದ ಪಟ್ಟಣದ ಬಸವ ಸಮೀತಿಯ ಅಧ್ಯಕ್ಷ ಡಾ.ಶಿದ್ದಗೌಡ ಕಾಗೆ ಇವರ ನೇತೃತ್ವದಲ್ಲಿ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಜಗಜ್ಯೋತಿ ಬಸವೇಶ್ವರ ಆಶ್ವಾರೂಢ ಪುಥ್ಥಳಿಯ ಅನಾವರಣಗೊಳ್ಳಲಿದೆ.
ಸಮಾರಂಭದ ದಿವ್ಯ ಸಾನಿದ್ಯವನ್ನು ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಜಿ, ಬಸವಲಿಂಗ ಸ್ವಾಮಿಜಿ, ಉಗಾರ ಖುರ್ದ, ಬಸವೇಶ್ವರ ಮಹಾಸ್ವಾಮಿಜಿ ಕೃಷ್ಣಾ ಕಿತ್ತೂರ, ಹರ್ಷಾನಂದ ಸ್ವಾಮಿಜಿ ಹುಲ್ಯಾಳಮಠ, ಸಾನಿದ್ಯವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಬಸವ ಸಮೀತಿಯ ಅಧ್ಯಕ್ಷ ಡಾ.,ಶಿದ್ದಗೌಡ ಕಾಗೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಕ್ಕರೆ ಉದ್ಯಮಿ ರಾಜಾಬಾಹು ಸಿರಗಾಂವಕರ, ಮಾಜಿ ಶಾಸಕ ರಾಜು ಕಾಗೆ, ಮಿರಜದ ಖ್ಯಾತ ಸ್ತ್ರೀ ರೋಗ ತಜ್ಞ ಡಾ.ಸೋಮಶೇಖರ ಪಾಟೀಲ ಇವರ ಉಪಸ್ಥಿತಿಯಲ್ಲಿ ಪುಥ್ಥಳಿ ಅನಾವರಣ ಕಾರ್ಯಕ್ರಮ ಜರುಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಡಾ.ಶಿದ್ದಗೌಡ ಕಾಗೆ ಮಾಹಿತಿ ನೀಡುವಾಗ ಬಸವ ಸಮೀತಿ ವತಿಯಿಂದ ಕೇವಲ ವೀರರ್ಶಐವ ಲಿಂಗಾಯತರಿಂದ ವಪಿಗೆ ಪಡೆದು ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಪುಥ್ಥಳಿ ನಿರ್ಮಿಸಲಾಗಿದೆ. ಸನ್ 2014 ರಲ್ಲಿ ಮಿರಜದ ಖ್ಯಾತ ಶಿಲ್ಪಿ ಗುಜ್ಜರ ಇವರು ಮುರ್ತಿ ನಿರ್ಮಿಸಿದ್ದಾರೆ. ಆದರೆ ರಸ್ತೆ ಅಗಲೀಕರಣಗೋಸ್ಕರ ಮೂರ್ತಿ ಪ್ರತಿಷ್ಠಾಪನೆಗೆ ವಿಳಂಬವಾಗಿದೆ ಎಂದು ತಿಳಿಸಿದರು. ಅಗಷ್ಟ 1 ರಂದು ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಯಾಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೆಕೇಂದು ಮನವಿ ಮಾಡಿದರು.