ಗುಳೇಗುಡ್ಡ

ಅನ್‌ಲಾಕ್ : ಬಸ್ ಸಂಚಾರ ಆರಂಭ, ಸಹಜ ಸ್ಥಿತಿಯತ್ತ ಜನಜೀವನ

ಅನ್‌ಲಾಕ್ : ಬಸ್ ಸಂಚಾರ ಆರಂಭ, ಸಹಜ ಸ್ಥಿತಿಯತ್ತ ಜನಜೀವನ

ಗುಳೇದಗುಡ್ಡ.21: ಸರ್ಕಾರದ ಅನ್‌ಲಾಕ್ ಆದೇಶದಿಂದ ಪಟ್ಟಣದಲ್ಲಿ ಸೋಮವಾರ ಜನಜೀವನ ಸಹಜಸ್ಥಿತಿಯತ್ತ ಮರಳುತ್ತಿದೆ. ಪ್ರಮುಖ ರಸ್ತೆ, ಮಾರುಕಟ್ಟೆ, ಸರ್ಕಾರಿ ಕಚೇರಿಗಳಿಗೆ ಜನರ ಓಡಾಟ ಹೆಚ್ಚಾಗಿ ಕಂಡು ಬಂದಿತು.  ಪಟ್ಟಣದ ಬಸ್ ಘಟಕದಿಂದ ಸೋಮವಾರ 9 ಬಸ್‌ಗಳನ್ನು ಆರಂಭಿಸಲಾಗಿದೆ ಎಂದು ಇಲ್ಲಿನ ಘಟಕದ ವ್ಯವಸ್ಥಾಪಕಿ ವಿದ್ಯಾ ನಾಯಕ ತಿಳಿಸಿದ್ದಾರೆ. 

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಒಟ್ಟು 47 ರೂಟ್‌ಗಳ ಪೈಕಿ ಸೋಮವಾರದಿಂದ ಸರ್ಕಾರ ಅನ್‌ಲಾಕ್ ಅದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸೋಮವಾರ 9 ಬಸ್‌ಗಳನ್ನು ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ ಹಾಗೂ ಇಲಕಲ್‌ಗಳಿಗೆ ಕಳಿಸಲಾಗಿದೆ. ಸೋಮವಾರ ಆರಂಭವಾಗಿದ್ದರಿಂದ ಪ್ರಯಣಿಕರ ಸಂಖ್ಯೆ ಕಡಿಮೆ ಇತ್ತು. ನಳೆ ಮಂಗಳವಾರದಿಂದ ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಇನ್ನೂ ಹೆಚ್ಚಿನ ಬಸ್‌ಗಳನ್ನು ಬೇರೇ ಬೇರೆ ಮಾರ್ಗಗಳಿಗೂ ಕಳಿಸುವ ಏರು​‍್ಡ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಖಾಸಗಿ ವಾಹನಗಳೂ ಸೋಮವಾರ ಆರಂಭವಾಗಿವೆ. ಗ್ರಾಮಾಂತರ ಪ್ರದೇಶಗಳಿಗೆ ಇನ್ನೂ ಬಸ್ ಸಂಚಾರ ಆರಂಭವಾಗಿಲ್ಲ. ಬದಲಾಗಿ ಖಾಸಗಿ ವಾಹನಗಳು, ಗೂಡ್ಸ್‌ ವಾಹನಗಳು, ಟಂಟಂಗಳು ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಂದ ಗುಳೇದಗುಡ್ಡ ಪಟ್ಟಣಕ್ಕೆ ಬರುವ ಸಂಚಾರ ಆರಂಭವಾಗಿವೆ. ಗುಳೇದಗುಡ್ಡದಿಂದಲೂ ತಾಲೂಕಿನ ವಿವಿಧ ಗ್ರಾಮಗಳಿಗೆ ಖಾಸಗಿ ವಾಹನಗಳ ಸಂಚಾರ ಸೋಮವಾರದಿಂದ  ಆರಂಭವಾಗಿವೆ.  

ಗುಳೇದಗುಡ್ಡ ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಸಂಪೂರ್ಣ ಇಳಿಕೆಯಾಗಿದೆ. ಲಸಿಕೆ ಅಭಿಯಾನದ ಕ್ರಮ ಆರಂಭವಾಗಿದೆ. ಸಾರ್ವಜನಿಕರಿಂದ ಆರೋಗ್ಯಪೂರ್ಣ ಅರಿವು ಇನ್ನೂ ಅಗತ್ಯವಾಗಿದೆ. ಗುಂಪುಗೂಡುವ, ವಿವಾಹ, ಉತ್ಸವಗಳಂತಹ ಕಾರ್ಯಕ್ರಮಗಳ ಮೇಲೆ ನಿಯಂತ್ರಣವಿರಲಿ  ಹಾಗೂ  ಸಾಮಾಜಿಕ ಅಂತರ ಕಾಪಾಡಲಿ ಶ್ರಿಜಿ.ಎಂ.ಕುಲಕರ್ಣಿ ತಹಸೀಲ್ದಾರರು, ಗುಳೇದಗುಡ್ಡ. 


ಸುದ್ದಿ ಓದಿ