ರೈತರೊಂದಿಗೆ ಲಂಗರ್ ಭೋಜನ ಸವಿದ ಕೇಂದ್ರ ಸಚಿವರು
ನವದೆಹಲಿ, ಡಿಸೆಂಬರ್ 30: ಗುರುದ್ವಾರಗಳಲ್ಲಿ ಉಚಿತವಾಗಿ ಕಲ್ಪಿಸುವ ಭೋಜನವನ್ನು ಲಂಗರ್ ಎಂದು
ಕರೆಯುತ್ತಾರೆ. ಬುಧವಾರ ಇಬ್ಬರು ಕೇಂದ್ರ ಸಚಿವರು ಮಧ್ಯಾಹ್ನ
ಆ ಭೋಜನ ಮಾಡಿದರು. ರೈತರೊಂದಿಗೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆಸಿದ ಚರ್ಚೆಯ ವೇಳೆ ಸಚಿವರು
ರೈತರೊಂದಿಗೆ ಕೂಡಿ ಭೋಜನ ನಡೆಸಿದರು. ಈವರೆಗೆ
ಆರು ಬಾರಿ ರೈತರು ಹಾಗೂ ಕೇಂದ್ರ
ಸಚಿವರ ನಡುವೆ ಚರ್ಚೆಗಳು ನಡೆದಿವೆ, ಆದರೆ ಐದು ಬಾರಿ
ಸಚಿವರು ಈ ಭೋಜನ ಸ್ವೀಕರಿಸಲು
ನಿರಾಕರಿಸಿದ್ದರು.
ಆದರೆ, ಸರ್ಕಾರ ನೀಡಿದ್ದ ಭೋಜನವನ್ನು ರೈತರು ಸಹ ತಿರಸ್ಕರಿಸಿಕೊಂಡೇ ಬಂದಿದ್ದಾರೆ. ಅವರು ಹೊರಗಿಂದ ಸ್ವಂತ ಆಹಾರವನ್ನು ಮಾತ್ರ ರೈತರು ಸೇವಿಸುತ್ತಿದ್ದಾರೆ. ಆದರೆ, ಇಂದು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ , ಸೋಮ್ ಪ್ರಕಾಶ್ ಅವರು, ರೈತರ ಆಹ್ವಾನದ ಮೇರೆಗೆ ಲಂಗರ್ ಭೋಜನ ಸೇವಿಸಿದರು. ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ದೆಹಲಿಯಲ್ಲಿ ರೈತರು ಕಳೆದೊಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಪ್ರತಿಭಟನೆ ಶಮನಗೊಳಿಸಲು ಕೇಂದ್ರ ಹಾಗೂ ರೈತರ ನಡುವೆ ಮಾತುಕತೆ ನಡೆಯುತ್ತಿದೆ.