ಸಿಂಧಗಿ

ಮೂರು ಮತಕ್ಷೇತ್ರದಲ್ಲಿ ಅವಿರೋಧ ಆಯ್ಕೆ ಮಾಡಿ

ಮೂರು ಮತಕ್ಷೇತ್ರದಲ್ಲಿ ಅವಿರೋಧ ಆಯ್ಕೆ ಮಾಡಿ

ಸಿಂದಗಿ ಫೆ.23 : ಇಡೀ ದೇಶಕ್ಕೆ ಅಂಟಿಕೊಂಡಿರುವ ಮಹಾರೋಗ ಕೊರೋನಾಕ್ಕೆ ಬಸವ ಕಲ್ಯಾಣ  ಶಾಸಕ ಬಿ.ನಾರಾಯಣ. ಸಿಂದಗಿಯ ಶಾಸಕ ಎಂ.ಸಿ.ಮನಗೂಳಿ ಹಾಗೂ ಬೆಳಗಾವಿಯ ಸಂಸದ ಸುರೇಶ್ ಅಂಗಡಿ ಅವರೆಲ್ಲರೂ ಬಲಿಯಾಗಿದ್ದಾರೆ. ಅವರ ನಿಧನಕ್ಕೆ ಕಣ್ಣೀರು ಸುರಿಸಿ ಶ್ರದ್ಧಾಂಜಲಿ ಅರ್ಪಿಸಿ ಹೊಗಳಿ ಮಾತನಾಡಿದರು ಸಾಲದು ರಾಜಕೀಯ ಕ್ಷೇತ್ರದಿಂದ ಮಾನವೀಯತೆ ಸಂದೇಶ ಸಾರುವ ಕಾಲಗಟ್ಟದಲ್ಲಿ ಎಲ್ಲ ಪಕ್ಷಗಳು ಅವಿರೋಧವಾಗಿ ಆಯ್ಕೆ ಮಾಡಿ ಒಳ್ಳೆಯ ಸಂದೇಶ ನೀಡಬೇಕು ವಿನ:ಹ ರಾಜಕೀಯ ಬೂಟಾಟಿಕೆಯ ಹೇಳಿಕೆಯಾಗಬಾರದು ಎಂದು ದಲಿತಸೇನೆ ಮೈನಾರಿಟಿ ರಾಜ್ಯ ಉಪಾಧ್ಯಕ್ಷ ಮೈಹಿಬೂಬ ಸಿಂದಗಿಕರ ತಿಳಿಸಿದ್ದಾರೆ.

ನಾಯಕರ ಅಗಲಿಕೆಗೆ ಮಠಾಧೀಶರು ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಮತದಾರರು ಕಣ್ಣೇರು ಹಾಕಿದ್ದಾರೆ ಐದು ವರ್ಷದ ಅಧಿಕಾರದ ಅವಧಿ ಮುನ್ನವೇ ಅವರು ಕೊರೋನಾಕ್ಕೆ ಬಲಿಯಾಗಿದ್ದರಿಂದ ರಾಜ್ಯಕ್ಕೆ ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಮರಣ ಹೊಂದಿದ ವ್ಯಕ್ತಿಯ ಕುಟಂಬದವರೊಂದಿಗೆ ರಾಜಕೀಯ ಮಾಡದೆ ಮೂರು ಮತಕ್ಷೇತ್ರದಲ್ಲಿ ಅವಿರೋಧ ಆಯ್ಕೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಸುದ್ದಿ ಓದಿ