ರಾಣೆಬೆನ್ನೂರ

ಉಜ್ಜಯಿನಿ ಜಗದ್ಗುರುಗಳ ದ್ವಾದಸ ಪಟ್ಟಾಧಿಕಾರ ತುಲಾಭಾರ ಸೇವೆ: ದಾನಿಗಳಿಗೆ ಗುರು ರಕ್ಷೆ ಇಂದು

ಉಜ್ಜಯಿನಿ ಜಗದ್ಗುರುಗಳ ದ್ವಾದಸ ಪಟ್ಟಾಧಿಕಾರ ತುಲಾಭಾರ ಸೇವೆ: ದಾನಿಗಳಿಗೆ ಗುರು ರಕ್ಷೆ ಇಂದು

 ರಾಣೇಬೆನ್ನೂರು 15: ವಾಣಿಜ್ಯ ನಗರದ ಮೇಡ್ಲೆರಿ  ರಸ್ತೆ, ವಿಜಯನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಶಿವಾನಂದ  ತಪೋಮಂದಿರ ಲೋಕಾರ್ಪಣೆ ಸಮಾರಂಭವು ನ.15ರಂದು ಬುಧವಾರ ಮಧ್ಯಾಹ್ನ 3 ಗಂಟೆಯಿಂದ   ನಡೆಯಲಿದೆ.        

ಈ ನಿಮಿತ್ತವಾಗಿ ನ. 16ರಂದು ಗುರುವಾರ ಮುಂಜಾನೆ 10-30 ಕ್ಕೆ ನಡೆಯಲಿರುವ ಧರ್ಮಸಭೆ ಧಾರ್ಮಿಕ ಕಾರ್ಯಕ್ರಮದಲ್ಲಿ ನೂತನ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ, ಶಿವ ದೀಕ್ಷಾ, ಜೋಗಮ್ಮನವರಿಗೆ ಪಡ್ಲಿಗಿ ತುಂಬುವ ಹಾಗೂ ಗ್ವಾರಪ್ಪಜ್ಜ ನವರಿಗೆ ದೋಣಿ ತುಂಬಿಸುವ ಸೇವೆ ನಡೆಯುವುದು. ಶ್ರೀಮದ್ ಉಜ್ಜಯನಿ ಸದ್ಧರ್ಮ ಸಿಂಹಾಸನಾದೀಶ್ವರ ಶ್ರೀ,1008 ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ದ್ವಾದಸ ಪಟ್ಟಾಧಿಕಾರದ ನಿಮಿತ್ತ ಉಜ್ಜಯಿನಿ ಸನ್ನಿಧಿಯವರಿಗೆ ತುಲಾಭಾರ ಸೇವೆ ಜರುಗಲಿದೆ. ದಿಂಡದಹಳ್ಳಿ ಪಂಚಮಠಾಧ್ಯಕ್ಷ ಷ. ಬ್ರ. ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಧರ್ಮಸಭೆಯ, ದಿವ್ಯ ಸಾನಿಧ್ಯವನ್ನು  ಶ್ರೀ,1008 ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರು ವಹಿಸುವರು ಶನೇಶ್ಚರ ಮಂದಿರದ  ಷ. ಬ್ರ, ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ನುಡಿ ಯಾಡುವರು. ರಟ್ಟಿಹಳ್ಳಿ ಕಬ್ಬಿಣ ಕಂತಿ ಮಠದ ಶಿವಲಿಂಗ ಶಿವಾಚಾರ್ಯರು, ಲಿಂಗ ನಾಯಕನಹಳ್ಳಿ ಚನ್ನವೀರ ಸ್ವಾಮಿಗಳು, ಲಿಂಗದಹಳ್ಳಿ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಹಿರೇಕುರುವತ್ತಿ ಸಿದ್ದ ನಂದೀಶ್ವರ ಶಿವಾಚಾರ್ಯ ಸ್ವಾಮಿಗಳು ಧರ್ಮಸಭೆಯ ಸಮ್ಮುಖದಲ್ಲಿರುವರು. ಸಮಾರಂಭದ ಅಧ್ಯಕ್ಷತೆ ವಹಿಸುವ ಶಾಸಕ ಪ್ರಕಾಶ ಕೋಳಿವಾಡ ಅವರು   " ಜೀವನ ಮುಕ್ತಿ ಸೋಪಾನ " ಗ್ರಂಥ ಬಿಡುಗಡೆಗೊಳಿಸುವರು. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಸಮಾರಂಭ ಉದ್ಘಾಟಿಸುವರು. 

ಹಿರೇಕೆರೂರು ಶಾಸಕ ಉಜನೇಶ ಬಣಕಾರ ಮಹಾದ್ವಾರ ಶಂಕುಸ್ಥಾಪನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಅರುಣಕುಮಾರ್ ಪೂಜಾರ, ಉಧ್ಯಮಿ, ಕೆ.ಇ.ಕಾಂತೇಶ, ಹೂವಿನ ಹಡಗಲಿ ಶಾಸಕ ಕ್ರಷ್ಣ ನಾಯಕ, ಸಂತೋಷ್ ಪಾಟೀಲ್, ಶೇಖಣ್ಣ ಹೊಸಗೌಡ್ರ, ಪಿ.ಜೆ. ಮರಿಯಮ್ಮನವರ, ಶಶಿಧರ ಬಸೇನಾಯ್ಕರ್, ಸುವರ್ಣ ಸುರಳಿಕೇರಿಮಠ, ಶ್ರೀಮತಿ ಸುಮಾ  ರವಿ. ಹುಚ್ಚಗೊಂಡರ, ರಾಮಣ್ಣ, ಎನ್.ಹೆಚ್. ಕುಮ್ಮಣ್ಣನವರ್,  ಬಸವರಾಜ ಸವಣೂರು, ಎನ್ ಬಾಪುಗೌಡ, ಬಸವರಾಜ ಬಿ, ಯೋಗೀಶ್ ಎನ್. ಆರ್, ಪ್ರಕಾಶ್ ಬುರಡಿಕಟ್ಟಿ ಸೇರಿದಂತೆ ಮತ್ತಿತರ ಗಣ್ಯರು, ರಾಜಕೀಯ ನಾಯಕರು, ಸ್ಥಳೀಯ ಸಂಘ,ಸಂಸ್ಥೆಗಳ ಮುಖಂಡರು, ನಗರಸಭಾ ಸದಸ್ಯರು ಪಾಲ್ಗೊಳ್ಳುವರು.

ದಾನಿಗಳಿಗೆ, ಶ್ರೀಮಠದ ಸೇವಕರಿಗೆ, ಗಣ್ಯರಿಗೆ, ವರ್ತಕರಿಗೆ ಮಹಾದಾನಿಗಳಿಗೆ, ಸಂಸ್ಥೆಗಳ ಮುಖಂಡರಿಗೆ ಜಗದ್ಗುರುಗಳವರಿಂದ ಗುರು ರಕ್ಷ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಶಿವಾನಂದ ತಪೋಮಂದಿರ ಸೇವಾ ಸಮಿತಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದರು.

ಸುದ್ದಿ ಓದಿ