ಉಗಾರ ಬಿ.ಕೆ ಗ್ರಾಮದ ಪದ್ಮಾವತಿ ಪ್ರೌಢ ಶಾಲೆ ಉತ್ತಮ ಫಲಿತಾಂಶ
ಕಾಗವಾಡ 25: ಕಳೆದ ಏಪ್ರಿಲ್ ತಿಂಗಳಿನಲ್ಲಿ ಜರುಗಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾಗವಾಡ ತಾಲೂಕಿನ ಉಗಾರ ಬಿ.ಕೆ ಗ್ರಾಮದ ಪದ್ಮಾವತಿ ಪ್ರೌಢ ಶಾಲೆಯ ವಿದ್ಯಾರ್ಥಿ ತರುಣ ಸಂಜಯಕುಮಾರ ಪಾಟೀಲ ಶೇ. 98.40 ಪ್ರಥಮ, ಸುಮೀತ ಸುನೀಲ ಸದಲಗೆ ಶೇ,97.44 ದ್ವಿತಿಯ, ಭಾವನಾ ಈರಗೌಡ ಪಾಟೀಲ ಶೇ.97.44 ತೃತಿಯ ಸ್ಥಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಪದ್ಮಾವತಿ ಮಂದಿರದ ಧರ್ಮದರ್ಶಿ ಶೀತಲಗೌಡ ಪಾಟೀಲ ಹೇಳಿದರು.
ಅವರು ಮಂಗಳವಾರ ದಿ.24 ರಂದು ಉಗಾರದ ಪದ್ಮಾವತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತ್ಯೂತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸಿಹಿ ತಿನಿಸಿ ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಪರೀಕ್ಷೆಗೆ ಒಟ್ಟು 47 ವಿದ್ಯಾರ್ಥಿಗಳು ಕುಳಿತಿದ್ದು, ಅದರಲ್ಲಿ 20 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ವಿದ್ಯಾರ್ಥಿಗಳು ಶೇ.95 ಕ್ಕೂ ಅಧಿಕ ಅಂಕಗಳನ್ನು ಪಡೆದು ಉತ್ತರ್ಣರಾಗಿದ್ದಾರೆ. ಕನ್ನಡ ವಿಷಯದಲ್ಲಿ 100 ಕ್ಕೆ 100 ಇಬ್ಬರು ವಿದ್ಯಾರ್ಥಿಗಳು ಅಂಕ ಪಡೆದಿದ್ದಾರೆ. ಸಮಾಜ ವಿಜ್ಞಾನದಲ್ಲಿ ನೂರಕ್ಕೆ ನೂರು 5 ವಿದ್ಯಾರ್ಥಿಗಳು, ಹಿಂದಿಯಲ್ಲಿ 14 ಹಾಗೂ ಗಣಿತದಲ್ಲಿ ಓರ್ವ ವಿದ್ಯಾರ್ಥಿ ಅಂಕ ಪಡೆದಿರುತ್ತಾರೆ.
ಇವರಿಗೆ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಪದ್ಮಾವತಿ ಮಂದಿರದ ಧರ್ಮದರ್ಶಿಗಳಾದ ಶೀತಲಗೌಡ ಪಾಟೀಲ, ಕಾರ್ಯದರ್ಶಿ ರಾವಸಾಬ ಘಾಳಿಮಟ್ಟಿ, ಆಡಳಿತ ಮಂಡಳಿಯ ಸದಸ್ಯರಾದ ಪ್ರಮೋದ ಹೊಸುರೆ, ಅಣ್ಣಾಸಾಬ ನಂದಗಾಂವೆ, ಮನೋಹರ ಚೌಗುಲೆ, ಬಾಬು ಅಕಿವಾಟೆ, ರಾಜೇಂದ್ರ ಚಿಂಚವಾಡೆ, ಸುರೇಂದ್ರ ಕುಸನಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಸಿಹಿ ಹಂಚಿ ಸನ್ಮಾನಿಸಿದರು. ಮುಖ್ಯೋಪಾದ್ಯಾಯ ರಾವಸಾಬ ಹೊನಮಾನೆ ಸ್ವಾಗತಿಸಿ ವಂದಿಸಿದರು. ಈ ವೇಳೆ ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.