ಉಗಾರ ಪುರಸಭೆ: ಉಳಿತಾಯ ಬಜೆಟ್ ಮಂಡನೆ
ಲೋಕದರ್ಶನ ವರದಿ
ಕಾಗವಾಡ 06: ತಾಲೂಕಿನ ಉಗಾರ ಪುರಸಭೆ ಮುಖ್ಯಾಧಿಕಾರಿ ಸುನಿಲ್ ಬಬಲಾದಿ, ಆಡಳಿತಾಧಿಕಾರಿ ಅಶೋಕ್ ಕಾಮಗೌಡ ಇವರು ಗುರುವಾರ ರಂದು 2.66 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.
ಸನ್ 2022-23 ಆರ್ಥಿಕ ವರ್ಷದ ಪುರಸಭೆ ಬಜೆಟ್ ಮಂಡನೆ ಕಾರ್ಯಕ್ರಮ ನೆರವೇರಿತು.
ಮುಖ್ಯಾಧಿಕಾರಿ ಸುನಿಲ್ ಬಬಲಾದಿ ಆಯ್ಯವ್ಯಯ ಪ್ರತಿ ಸಿದ್ಧಪಡಿಸಿ ಸಭೆಯಲ್ಲಿ ಓದಿದರು. ಪುರಸಭೆಯ 15.03 ಕೋಟಿ ರೂ. ಆದಾಯ ಬರುತ್ತಿದ್ದು 20.68 ಲಕ್ಷ ಹಣವನ್ನು ವಿವಿಧ ಕಾಮಗಾರಿಗಳಿಗೆ ಮೀಸಲಿಟ್ಟಿದಾರೆ. ಅದರಲ್ಲಿ ಎಸ್‌ಸಿ, ಎಸ್ಟಿಯ ವಿವಿದ ಕಾಮಗಾರಿಗಳಿಗೆ 24.10 ಲಕ್ಷ ರೂ. ಸಾಮಾನ್ಯವಾಗಿ 7.25 ಲಕ್ಷ ರೂ. ಅಂಗವಿಕಲರಿಗಾಗಿ ಕಲ್ಯಾಣಕ್ಕಾಗಿ 5 ಲಕ್ಷ ರೂ. ಕಾಯ್ದಿರಿಸಲಾಗಿದೆ. ಮೂಲಸೌಕರ್ಯ ಆಗಿ ಹಣ ಕಾಯ್ದಿರಿಸಲಾಗಿದೆ. ಮತ್ತು 2.66 ಉಳಿತಾಯ ಬಜೆಟ್ ಮಂಡಿಸಿದೇನೆ ಎಂದು ಮುಖ್ಯ ಅಧಿಕಾರಿಗಳಾದ ಸುನಿಲ್ ಬಬಲಾದಿ ತಿಳಿಸಿದರು.