ಉಗಾರ ಲಯನ್ಸ್ ಕ್ಲಬ್ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ
ಕಾಗವಾಡ 03: ಉಗಾರ ಲಯನ್ಸ್ ಕ್ಲಬ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಸನ್ 2022-23 ವರ್ಷಕ್ಕಾಗಿ ಅಧಿಕಾರ ಹಸ್ತಾಂತರಿಸುವ ಕಾರ್ಯಕ್ರಮ ನೆರವೇರಿತು.
ಶುಕ್ರವಾರ ಸಂಜೆ ಉಗಾರ್ ಖುರ್ದ ಪಟ್ಟಣದ ಬಾಲ ಮಂದಿರ ಭವನದಲ್ಲಿ ಗೋವಾ ರಾಜ್ಯದ ಜಿಲ್ಲಾ ಲಯನ್ಸ್ ಗವರ್ನರ್ ಅರ್ಲೆ ಬ್ರಿಟೊ ಇವರು ನೂತನ ಸದಸ್ಯರಿಗೆ ಅಧಿಕಾರದ ಬೋಧನೆ ಮಾಡಿ ಶಪಥ ನೀಡಿ ಅಧಿಕಾರ ಹಸ್ತಾಂತರಿಸಿದರು.
ಕಾಗವಾಡದ ವಿದ್ಯಾವರ್ಧಕ ಶಿಕ್ಷಣ ಸಮಿತಿಯ ಅಧ್ಯಕ್ಷರು, ಪಿಕೆಪಿಎಸ್ ಅಧ್ಯಕ್ಷರು ಮತ್ತು ರಾಜ್ಯ ಸರ್ಕಾರದ ಅತ್ಯುತ್ತಮ ರೈತ ಪ್ರಶಸ್ತಿ ಪಡೆದ ಜ್ಯೋತಿಕುಮಾರ್ ಸಿದ್ಧಗೌಡ ಪಾಟೀಲ್ ಇವರಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಿ ನಿಕಟ ಪೂರ್ವ ಅಧ್ಯಕ್ಷ ಡಾ. ಬಾಬಾಗೌಡ ಪಾಟೀಲ್ ಇವರಿಂದ ಅಧಿಕಾರ ಹಸ್ತಾಂತರಿಸಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿಗಳಾಗಿ ರಾಜೇಂದ್ರ ಪೋತದಾರ್, ಖಜಾಂಚಿ ಡಾ. ಮೋಹನ್ ಕಟಗೇರಿ, ಉಪಾಧ್ಯಕ್ಷರಾಗಿ ಆರ್.ಜಿ.ಕಿಲ್ಲೆದಾರ್, ರಾಹುಲ್ ಶಾಹ, ಮನಿಷ ಶಾಹ ಸೇರಿದಂತೆ ಇನ್ನುಳಿದ ಸದಸ್ಯರನ್ನುಆಯ್ಕೆ ಮಾಡಿ ಅಧಿಕಾರ ಹಸ್ತಾಂತರಿಸಿದರು.
ಸಮಾರಂಭದಲ್ಲಿ ಕ್ಲಬ್ನ ಹಿರಿಯ ಸದಸ್ಯ ಜಗದೀಶ್ ಕುಲಕರ್ಣಿ ಇವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಇವರಿಂದ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿದ್ದರಿಂದ ಎಲ್ಲಾ ಅತಿಥಿಗಳು ಸಮಾರಂಭದಲ್ಲಿ ಸನ್ಮಾನಿಸಿ ಅವರ ಸೇವೆ ಹೋಗಳಿದರು. ಇದೆ ರೀತಿ ವೈದ್ಯಕೀಯ ದಿನಾಚರಣೆ ನಿಮಿತ್ಯ ಕ್ಲಬ್ಬಿನ 20 ವೈದ್ಯರಿಗೆ ಸಸಿ ನೀಡಿ ಗೌರವಿಸಿದರು.
ಕ್ಲಬ್ನ ನಿಕಾಟ್ಪೂರ್ವ ಅಧ್ಯಕ್ಷ ಡಾ. ಬಾಬಾಗೌಡ ಪಾಟೀಲ್ ಇವರು ಕಳೆದ ಸನ್ 2021-22 ವರ್ಷದಲಿ ಅತ್ಯುತ್ತಮ ಸಮಾಜ ಸೇವೆ ಸಲ್ಲಿಸಿದ್ದಾರೆ. ಇದನ್ನು ಗಮನಿಸಿ ಕ್ಲಬ್ಬಕ್ಕೆ ಅಮೆರಿಕಾ ದೇಶದ ಇಂಟರ್ನ್ಯಾಷನಲ್ ಲಯನ್ಸ್ ಕ್ಲಬ್ ವತಿಯಿಂದ ಅತ್ಯುತ್ತಮ ಶಾಖೆ ಎಂದು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇದರ ನಿಮಿತ್ಯೆ ಡಾ. ಬಾಬಗೌಡ ಪಾಟೀಲ್ ಇವರನ್ನು ಸನ್ಮಾನಿಸಿ ಅವರ ಸೇವೆ ಸ್ಲಾಗಿಸಿದರು. ಸಮಾರಂಭ ವಿಶೇಷಗೊಳಿಸಲು ಕ್ಲಬ್ಬಿನ ಎಲ್ಲಾ ಸದಸ್ಯರು, ಮಹಿಳಾ ಸದಸ್ಯರು ಸಹಕರಿಸಿದರು.