ನವ ಸಂವತ್ಸರ ಸ್ವಾಗತ ಸಮಾರಂಭ
ಶೇಡಬಾಳ 14: ಚಂದ್ರಮಾನ ಯುಗಾದಿ ಹಬ್ಬವು ನಾಡಿನ ಸಮಸ್ತ ಜನರಿಗೆ ಸುಖ, ಶಾಂತಿ, ಸಮೃದ್ಧಿ, ಆಯುರ್ ಆರೋಗ್ಯ ಲಭಿಸಲಿ ಎಂದು ಕೈಮಗ್ಗ, ಜವಳಿ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಶ್ರೀಮಂತ ಪಾಟೀಲ ಶುಭ ಕೋರಿದರು.
ದಿ. 13 ರಂದು ಶೇಡಬಾಳ ಪಟ್ಟಣದ ಕಲ್ಮೇಶ್ವರ ದೇವಾಲಯದಲ್ಲಿ ಆಯೋಜಿಸಲಾಗಿದ್ದ ನವ ಸಂವತ್ಸರ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಹಿಂದು ಧರ್ಮ ಶಾಸ್ತ್ರದ ಪ್ರಕಾರ ಯುಗಾದಿ ಹಬ್ಬದಿಂದ ಹೊಸ ವರ್ಷ ಪ್ರಾರಂಭವಾಗುತ್ತಿದ್ದು, ಕರ್ನಾಟಕದ ಸಮಸ್ತ ಜನತೆಗೆ ನೆಮ್ಮದಿ, ಸುಖ, ಶಾಂತಿ, ಆರೋಗ್ಯ ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತಾ ಅವರು ಕಂಡ ಕನಸುಗಳೆಲ್ಲ ಹಾಗೂ ಇಷ್ಟಾರ್ಥಗಳೆಲ್ಲ ಇಡೇರಲಿ ಎಂದು ಶುಭ ಕೋರುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭರತೇಶ ಪಾಟೀಲ ವಹಿಸಿದ್ದರು.
ಈ ಸಮಯದಲ್ಲಿ ಪಪಂ ಅಧ್ಯಕ್ಷ ರವೀಂದ್ರ ಕಾಂಬಳೆ, ಭರತೇಶ ಪಾಟೀಲ, ಅನಿಲ ಕುಲಕರ್ಣಿ, ಸದಾನಂದ ದತ್ತವಾಡಕರ, ಪ್ರಸಾದ ಸಂಗೋರಾಮ, ನೇಮಗೌಡ ಪಾಟೀಲ, ರಾಜು ಕುಸನಾಳೆ, ಭರತೇಶ ನಾಂದ್ರೆ, ಸುಮತಿನಾಥ ಪಾಟೀಲ, ಗಿರೀಶ ಕುಲಕರ್ಣಿ, ಶ್ರೀನಿವಾಸ ಪತಗಿ, ಚಂದು ಜಾಧವ, ಅಣ್ಣಾ ಅರವಾಡೆ, ವಸಂತ ಶಿಂಧೆ, ಸಚೀನ ಜಗತಾಪ, ಕಿರಣ ಯಂದಗೌಡರ ಸೇರಿದಂತೆ ಅನೇಕರು ಇದ್ದರು.