ಟೈಪಿಂಗ್ ಮತ್ತು ಸ್ಟೆನೋ ಫಲಿತಾಂಶ ಪ್ರಕಟ: ಮಮತಾ ವಾಣಿಜ್ಯ ವಿದ್ಯಾ ಸಂಸ್ಥೆಗೆ ಶೇ. 80 ರಷ್ಟು ಫಲಿತಾಂಶ
ರಾಣೇಬೆನ್ನೂರು, ಸೆ.30: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಜುಲೈ ಮಾಹೆಯಲ್ಲಿ ನಡೆಸಿದ ಟೈಪಿಂಗ್ ಮತ್ತು ಸ್ಟೆನೋ ಫಲಿತಾಂಶ ಪ್ರಕಟವಾಗಿದ್ದು ಇಲ್ಲಿನ ಪ್ರತಿಷ್ಠಿತ ಮಮತಾ ವಾಣಿಜ್ಯ ವಿದ್ಯಾ ಸಂಸ್ಥೆಗೆ ಶೇ. 80 ರಷ್ಟು ಫಲಿತಾಂಶ ದೊರೆತಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 115 ವಿದ್ಯಾರ್ಥಿಗಳಲ್ಲಿ 25 ಉನ್ನತ, 24 ಪ್ರಥಮ, 30 ದ್ವಿತೀಯ, 10 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಆಂಗ್ಲ ಬೆರಳಚ್ಚು ಪ್ರೌಢ ದರ್ಜೆಯಲ್ಲಿ ಕು. ಐಶ್ವರ್ಯ ನಾಯ್ಕ, ಪುಟ್ಟನಗೌಡ್ರ, ಗುಲಗಂಜಿ, ಹೂಲಿಹಳ್ಳಿ ಸಾಕಮ್ಮ, ಪೂಜಾ ಹಿರೇಮಠ, ಅಭಿಷೇಕ ಲಮಾಣಿ, ಸಚಿನ್ ತುಮ್ಮಿನಕಟ್ಟಿ ತೇರ್ಗಡೆ ಹೊಂದಿದ್ದಾರೆ. ಆಂಗ್ಲ ಪ್ರಥಮ ದರ್ಜೆಯಲ್ಲಿ ಚೇತನಕುಮಾರ, ಸಂಗೀತಾ, ಮೇಘಾ ಹಿರೇಮಠ, ರಾಹುಲ್ ಬೆಲ್ಲದ, ವೀಣಾ ಲಕ್ಷ್ಮೇಶ್ವರ ಪಾಸಾಗಿದ್ದಾರೆ.
ಕನ್ನಡ ಬೆರಳಚ್ಚು ಪ್ರೌಢ ದರ್ಜೆಯಲ್ಲಿ ಅಭಿಷೇಕ ಲಮಾಣಿ, ಕನ್ನಡ ಬೆರಳಚ್ಚು ಪ್ರಥಮ ದರ್ಜೆಯಲ್ಲಿ ಕು. ಪವಿತ್ರಾ ಲಮಾಣಿ, ಮೇಘಾ, ಚೇತನಕುಮಾರ, ಸಂಗೀತಾ ಯಶಸ್ವಿನಿ, ಮಾಲತೇಶ, ರಾಹುಲ್, ವಾಣಿಶ್ರೀ, ನಿರ್ಮಲಾ ಅಣ್ಣಿ, ಮಮತಾ ಅಸುಂಡಿ ಇವರು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಜಿಲ್ಲೆಗೆ ಪ್ರಥಮರಾಗಿದ್ದಾರೆ.
ಪ್ರಥಮ ದರ್ಜೆ ಆಂಗ್ಲ ಶೀಘ್ರಲಿಪಿಯಲ್ಲಿ ಕು. ಚೈತ್ರಾ ಚೌಡಣ್ಣನವರ, ಕೆಂಪಣ್ಣನವರ, ಚಂದಮ್ಮನವರ ಉತ್ತೀರ್ಣರಾಗಿದ್ದಾರೆ. ಕನ್ನಡ ಶೀಘ್ರಲಿಪಿಯಲ್ಲಿ ಭಾವನಾ, ವೀಣಾ, ಬಡಿಗೇರ, ಶಿವರಡ್ಡಿ, ನಾಯಕ್, ಚಲವಾದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರೌಢದರ್ಜೆ ಇಂಗ್ಲೀಷ ಶೀಘ್ರಲಿಪಿಯಲ್ಲಿ ಪುನೀತ ಚೌಡಣ್ಣನವರ, ಕು. ಬಿಂದು ಕದರಮಂಡಲಗಿ, ಅರುಣ, ತುಲಜಾ, ಗೋವಿಂದಪ್ಪನವರ ಇವರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಶೇಷವಾಗಿ ಪ್ರೌಢದರ್ಜೆ ಆಂಗ್ಲ ಶೀಘ್ರಲಿಪಿ ಪರೀಕ್ಷೆಗೆ ಕುಳಿತ ಎಲ್ಲ ಏಳೂ ವಿದ್ಯಾರ್ಥಿಗಳು ಉತ್ತೀರ್ಣರಾಗುವದರೊಂದಿಗೆ ಸಂಸ್ಥೆಗೆ ಶೇ: 100 ರಷ್ಟು ಫಲಿತಾಂಶ ಬಂದಿರುತ್ತದೆ. ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಪ್ರಾಚಾರ್ಯ ಎಸ್.ಬಿ. ಅಂಗಡಿ ಅಭಿನಂದಿಸಿದ್ದಾರೆ.