ಯರಗಟ್ಟಿ

ಕಾರ್‌-ಟ್ರಕ್ ನಡುವೆ ಅಪಘಾತ: ಇಬ್ಬರ ಸಾವು

ಕಾರ್‌-ಟ್ರಕ್ ನಡುವೆ ಅಪಘಾತ: ಇಬ್ಬರ ಸಾವು

ಯರಗಟ್ಟಿ 06: ಗುರುವಾರ ಬೆಳಂಬೆಳಗ್ಗೆ ಯರಗಟ್ಟಿ ಪಟ್ಟಣದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲಾರಿ ಚಾಲಕ ಹಾಗೂ ಕಾರ್ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. 

ಯರಗಟ್ಟಿಯ ಭೀರೇಶ್ವರ ಬ್ಯಾಂಕ್ ಎದುರಿನ ರಸ್ತೆ ಪಕ್ಕ ನಿಂತಿದ್ದ ಲಾರಿಗೆ ರಭಸವಾಗಿ ಗುದ್ದಿದ ಕಾರು ಲಾರಿಯಲ್ಲಿದ್ದ ಸರಕಿಗೆ ಹಗ್ಗ ಕಟ್ಟಿ ಪ್ಯಾಕ್ ಮಾಡುತ್ತಿದ್ದ ಲಾರಿ ಚಾಲಕನಿಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಲಾರಿ ಚಾಲಕ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದವರ ಸ್ಥಿತಿ ಚಿಂತಾಜನಕವಾಗಿದೆ.ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ರಂಗಪ್ಪ ಗುರುಸಿದ್ದಪ್ಪ ಪಾಟೀಲ (30), ಕಾರಿನಲ್ಲಿದ್ದ ಸಿಂಧನೂರು ಗ್ರಾಮದ ಗೌಡಪ್ಪಗೌಡ ಮಾಲಿಪಾಟೀಲ (25) ಸಾವನ್ನಪ್ಪಿದ್ದಾರೆ. ಅಮರೆಗೌಡ ಮಾಲಿಪಾಟೀಲ (58), ವೀರಭದ್ರಗೌಡ ಡಬಿ (32), ಹನುಮಂತ ಬೆಟಗೇರಿ ಗಾಯಗೊಂಡಿದ್ದಾರೆ. ರಾಯಚೂರ ಜಿಲ್ಲೆಯ ಸಿಂಧನೂರು ಪಟ್ಟಣದವರು. ಮಾಸಿಕ ಚೆಕ್‌ಅಪ್‌ಗೆ ಸಿಫ್ಟ್‌ ಕಾರಲ್ಲಿ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಬರುತ್ತಿದ್ದ ತಂದೆ-ಮಗ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಗುದ್ದಿದೆ. ಗಾಯಗೊಂಡ ಮೂವರನ್ನು ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸ್ಥಳಕ್ಕೆ ಪ್ರೋಪೆಸ್ನರಿ ಪಿಎಸ್‌ಐ ಬಸನಗೌಡ ನಿರ್ಲೀ, ಲಕ್ಷ್ಮೀ ಬಿರಾದಾರ, ಎಎಸ್‌ಐ ವಾಯ್‌. ಎಂ. ಕಡಕೋಳ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. 


ಸುದ್ದಿ ಓದಿ