ಧಾರವಾಡ - ಹುಬ್ಬಳ್ಳಿ

ತಿಂಡಿಗೆ ಬಂದ ತುಂಡೇರಾಯನ ನಾಟಕ ಪ್ರದರ್ಶನ

ತಿಂಡಿಗೆ ಬಂದ ತುಂಡೇರಾಯನ ನಾಟಕ ಪ್ರದರ್ಶನ

ಧಾರವಾಡ 09: ಧಾರವಾಡ ರಂಗಾಯಣವು ಅ.11 ರಂದು ಸಂಜೆ 6.00ಕ್ಕೆ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಶಖೀಲ್ ಅಹ್ಮದ್ ಅವರು ನಿರ್ದೇಶಿಸಿದ “ತಿಂಡಿಗೆ ಬಂದ ತುಂಡೇರಾಯ” ನಾಟಕ ಪ್ರದರ್ಶನವನ್ನು ಆಯೋಜಿಸಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಅವರು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ರಂಗಾಯಣ ನಿರ್ದೇಶಕರಾದ ಡಾ. ರಾಜು ತಾಳಿಕೋಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿಗಳು, ರಂಗಾಸಕ್ತರು ನಾಟಕ ಪ್ರದರ್ಶನಕ್ಕೆ ಆಗಮಿಸಬೇಕು ಎಂದು ರಂಗಾಯಣದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ