ಸಂಭ್ರಮದಿಂದ ತುಳಸಿ ವಿವಾಹ
ಲೋಕದರ್ಶನ ವರದಿ
ಯರಗಟ್ಟಿ 07: ಸಮೀಪದ ತಲ್ಲೂರ ಗ್ರಾಮದಲ್ಲಿ ಸಾಯಂಕಾಲ 6.30ಕ್ಕೆ ಕಾರ್ತಿಕ ಶುದ್ಧ ದ್ವಾದಶಿ ಪ್ರಯುಕ್ತ ತುಳಸಿ ಪೂಜಾ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಮುಂಜಾನೆ ತುಳಸಿ ಕಟ್ಟೆ ತೊಳೆದು, ಕಬ್ಬು, ಮಾವಿನ ತಳಿರು ತೋರಣ, ಹುಣಸೆ ಹಾಗೂ ಹೂಗಳಿಂದ ಅಲಂಕಾರ ಪೂಜೆ ಮಾಡಲಾಯಿತು. ದೀಪಗಳಿಂದ ತುಳಸಿ ಕಟ್ಟೆ ಆವರಣದ ತುಂಬೆಲ್ಲಾ ಬೆಳಗಿಸಲಾಯಿತು. ಗಣೇಶ ಪೂಜೆ ಬಳಿಕ ಶ್ರೀಕೃಷ್ಣ ಮೂರ್ತಿಗೆ ಅಭಿಷೇಕ ನೆರವೇರಿಸಲಾಯಿತು. ವಿಠ್ಠಲ ರುಕ್ಮಿಣಿ ದೇವಸ್ಥಾನ ಹಾಗೂ ಮನೆ ಮನೆಗಳಲ್ಲಿ ಶ್ರದ್ಧಾ ಭಕ್ತಿಯಿಂದ ತುಳಸಿ ಮಾತೆಗೆ ಪೂಜಾ ಪೂಜೆಸಲ್ಲಿಸಲಾಯಿತು. ಸುಮಂಗಲಿಯರಿಗೆ ಎಲೆ, ರವಿಕೆ ಕಣ ನೀಡಿ ಉಡಿ ತುಂಬಿ ಸಿಹಿ ಹಂಚಿದರು. ನಂತರ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಸಯ್ಯ ಹಿರೇಮಠ ಪೂಜೆ ಕಾರ್ಯಕ್ರಮ ನೆರವೇರಿಸಿದರು, ತುಳಸಜಾ ಬಡಿಗೇರ, ಗಂಗವ್ವ ಕಾಜಗರ, ವಿಜಯಲಕ್ಷ್ಮೀ ಉಪ್ಪಿನ, ಶಶಿಕಲಾ ಪತ್ತಾರ, ಮಹಂತವ್ವ ಉಪ್ಪಿನ, ವಿಠ್ಠಲ ಬಡಿಗೇರ, ಅಣ್ಣಪ್ಪ ಪತ್ತಾರ ಇತರರು ಇದ್ದರು.