ಬೈಲಹೊಂಗಲ

ಸಂಭ್ರಮದಿಂದ ತುಳಸಿ ವಿವಾಹ ಪೂಜೆ

ಸಂಭ್ರಮದಿಂದ ತುಳಸಿ ವಿವಾಹ ಪೂಜೆ

ಬೈಲಹೊಂಗಲ 17:  ಪಟ್ಟಣದಲ್ಲೆಲ್ಲಾ ಮಂಗಳವಾರ ಸಂಜೆ  ಸಾರ್ವಜನಿಕರು ತಮ್ಮ ಮನೆಯಂಗಳದಲ್ಲಿನ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುವ ಮೂಲಕ ಸಕಲ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು. 

ಕಾರ್ತಿಕ ಮಾಸದಲ್ಲಿ ತುಳಸಿಯನ್ನು ಪೂಜಿಸಿ ನಮಸ್ಕರಿಸುವದರಿಂದ ವಿಶೇಷ ಫಲ ದೊರೆಯುತ್ತದೆ. 

ದೀಪಾವಳಿ ನಂತರ ಆಗಮಿಸುವ ತುಳಸಿ ಲಗ್ನ ಪ್ರತಿ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ತುಳಸಿ ಪೂಜೆ ಮಾಡುವದರಿಂದ ಎಲ್ಲ ಕಷ್ಟಗಳು ಪರಿಹಾರವಾಗುತ್ತವೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಭಾವನೆ ಭಕ್ತರಲ್ಲಿದೆ.  ತುಳಸಿ ವಿವಾಹಕ್ಕೆ  ಪೂಜಾ ಸಾಮಾಗ್ರಿ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ  ಸಾರ್ವಜನಿಕರು ಮಾರುಕಟ್ಟೆಗೆ  ಆಗಮಿಸಿ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಕಂಡು ಬಂತು. ಬಾಳೆ ಗಿಡ, ನೆಲ್ಲಿ, ಹುಣಸೆ ಟೊಂಗೆ, ಕಬ್ಬು ಸೇವಂತಿ ಚೆಂಡು ಹೂ ಖರೀದಿಸಿ ಸಂಜೆ ತುಳಸಿ ವಿವಾಹ ನೆರವೇರಿಸಿದರು. 


ಸುದ್ದಿ ಓದಿ