ಪ್ರಾಚಾರ್ಯರಾಗಿ ತುಗಶೆಟ್ಟಿ ಅಧಿಕಾರ ಸ್ವೀಕಾರ
ಶೇಡಬಾಳ 31: ಈ ಭಾಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಎಸ್‌ಎಂಎ ಟ್ರಸ್ಟ್‌ನ ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಶಿಕ್ಷಣಶಾಸ್ತ್ರ ಪ್ರಾಧ್ಯಾಪಕರಾದ ಮೇಜರ್ ವ್ಹಿ.ಎಸ್.ತುಗಶೆಟ್ಟಿಯವರು ಸೋಮವಾರ ದಿ. 31 ರಂದು ಅಧಿಕಾರ ಸ್ವೀಕರಿಸಿದರು.
ಇಲ್ಲಿಯವರೆಗೆ ಶಿವಾನಂದ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೊ. ಬಿ.ಎ.ಪಾಟೀಲ ಅವರು ನಿವೃತ್ತಿ ಹೊಂದಿರುವ ಕಾರಣ ಆ ಸ್ಥಾನಕ್ಕೆ ಮೇಜರ್ ವ್ಹಿ.ಎಸ್. ತುಗಶೆಟ್ಟಿಯವರು ಆಯ್ಕೆಯಾಗಿದ್ದಾರೆ.
ನೂತನವಾಗಿ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿರುವ ಮೇಜರ್ ವ್ಹಿ.ಎಸ್. ತುಗಶೆಟ್ಟಿಯವರನ್ನು ಎಸ್‌ಎಂಎ ಟ್ರಸ್ಟ್‌ನ ಏಕನ್ಯಾಸಧಾರಿಗಳಾದ ಯತೀಶ್ವರಾನಂದ ಸ್ವಾಮೀಜಿಯವರು, ಅಧ್ಯಕ್ಷರಾದ ಪ.ಪೂ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರು, ಆಡಳಿತ ಮಂಡಳಿಯ ಸದಸ್ಯರುಗಳಾದ ಡಾ.ಶೃದ್ಧಾನಂದ ಸ್ವಾಮೀಜಿ, ಇಷ್ಟಲಿಂಗ ಸ್ವಾಮೀಜಿ ಮೇಜರ್ ವ್ಹಿ.ಎಸ್.ತುಗಶೆಟ್ಟಿಯವರಿಗೆ ಶುಭ ಹಾರೈಸಿ ಅಭಿನಂದಿಸಿದ್ದಾರೆ.
ಎ.ಎ.ಪಾಟೀಲ, ಪ-ಪೂ ಪ್ರಾಚಾರ್ಯ ಪಿ.ಬಿ.ನಂದಾಳೆ, ಹಿರಿಯ ಪ್ರಾಧ್ಯಾಪಕರಾದ ಉಪ ಪ್ರಾಚಾರ್ಯ ಡಾ.ಎಸ್.ಎ.ಕರ್ಕಿ, ನಿವೃತ್ತ ಪ್ರಾಚಾರ್ಯ ಡಾ.ಎಸ್.ಓ.ಹಲಸಗಿ, ಪ್ರೊ. ಎಸ್.ಎಸ್.ಬಾಗನೆ, ಪ್ರಾಧ್ಯಾಪಕರುಗಳಾದ ಡಾ.ಎಸ್.ಪಿ.ತಳವಾರ, ಪ್ರೊ. ಜೆ.ಕೆ.ಪಾಟೀಲ ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮೊದಲಾದವರು ಮೇಜರ್ ವ್ಹಿ.ಎಸ್.ತುಗಶೆಟ್ಟಿಯವರನ್ನು ಅಭಿನಂದಿಸಿದ್ದಾರೆ.