ಕ್ಷಯ ಮುಕ್ತ ಭಾರತ ಜನ ಜಾಗೃತಿ ಅಭಿಯಾನ
ರಾಣೆಬೆನ್ನೂರು 05: ಇಲ್ಲಿನ ಲಯನ್ಸ್ ಶಾಲಾ ಭವನದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಕ್ಷಯ ರೋಗ ವಿಚಾರ ಸಂಕಿರಣ ಮತ್ತು ಅರಿವು ಜಾಗೃತಿ ಪಾದಯಾತ್ರೆ ನಡೆಯಿತು. ಲಯನ್ಸ್ ಸೇವಾ ಸಂಸ್ಥೆ ಆರ್ ಟಿಇ ಎಸ್ ಕಾಲೇಜ್, ಭಾರತೀಯ ವೈದ್ಯಕೀಯ ಸಂಘ ಮತ್ತಿತರ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿದ್ದವು. ಮಲ್ಲೇಶಪ್ಪ ಅರಕೇರಿ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ : ಸರಸ್ವತಿ ಬಮ್ಮನಾಳ ವಿಚಾರ ಸಂಕಿರಣ ಉದ್ಘಾಟಿಸಿದರು. ವೇದಿಕೆಯಲ್ಲಿ ಪ್ರಭುಲಿಂಗಪ್ಪ ಹಲಗೇರಿ, ಮಹೇಶ್ ಅಡಿವೆಪ್ಪನವರ, ಬಸವರಾಜ ಪಾಟೀಲ, ಜಟ್ಟಪ್ಪ ಕರೇಗೌಡ್ರ ಟಿ.ವೀರಣ್ಣ, ಡಾ : ಪ್ರವೀಣ ಖನ್ನೂರ್, ಆರ್. ವಿ.ಸೂರಗೊಂಡ, ಮಂಜು ಜ್ಯೋತಿ, ಜಗದೀಶ ಪಾಟೀಲ್, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಇಲಾಖೆಯ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಪಾಲ್ಗೊಂಡಿದ್ದರು.