ಶೇಡಬಾಳ ಪಟ್ಟಣದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಪ್ರಯತ್ನಿಸಿ: ಶಾಸಕ ರಾಜು ಕಾಗೆ
ಕಾಗವಾಡ 11: ತಾಲೂಕಿನ ಶೇಡಬಾಳ ಪಟ್ಟಣದ ಪ್ರತಿಯೊಬ್ಬ ಸದಸ್ಯರು ಪಕ್ಷಾತೀತವಾಗಿ ಪ್ರಯತ್ನಿಸಿ, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ವಾಯ್ಯವ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ ಸದಸ್ಯರಿಗೆ ಸಲಹೆ ನೀಡಿದರು.
ಅವರು, ಸೋಮವಾರ ದಿ. 11 ರಂದು ತಾಲೂಕಿನ ಶೇಡಬಾಳ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ನಂತರ ನಡೆದ ಮೊದಲ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪಟ್ಟಣದ ಅಭಿವೃದ್ಧಿಗಾಗಿ ಸದಸ್ಯರು ಮತ್ತು ಅಧಿಕಾರಿಗಳು ಸೇರಿ ಕೆಲಸ ಮಾಡಬೇಕು. ಕರವಸೂಲಾತಿ ಶೇ. 100 ರಷ್ಟು ಮಾಡಬೇಕು. ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದರು. ಅದಕ್ಕೆ ಪಕ್ಷಾತೀತವಾಗಿ ತಾವು ಶ್ರಮಿಸಿ, ನಾನು ನಿಮಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದರು.
ಈ ಸಮಯದಲ್ಲಿ ಪ.ಪಂ. ಅಧ್ಯಕ್ಷ ಉತ್ಕರ್ಷ ಪಾಟೀಲ, ಉಪಾಧ್ಯಕ್ಷ ದೀಪಾ ಹೊನಕಾಂಬಳೆ, ಮುಖ್ಯಾಧಿಕಾರಿಗೆ ಸುರೇಶ ಪತ್ತಾರ ಸೇರಿದಂತೆ ಎಲ್ಲ ಸದಸ್ಯರು, ಪ.ಪಂ. ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಮುಖಂಡ ಸುಭಾಷ ಢಾಲೆ ಪ್ರಾಸ್ಥಾವಿಕವಾಗಿ ಮಾತನಾಡಿದರು.