ಗೋಕಾಕ್

ಮತಗಟ್ಟೆ, ಚೆಕ್‍ಪೋಸ್ಟಗಳನ್ನು ವೀಕ್ಷಿಸಿದ ಚುನಾವಣಾ ವೀಕ್ಷಕ ತ್ರಿಪಾಠಿ

ಮತಗಟ್ಟೆ,  ಚೆಕ್‍ಪೋಸ್ಟಗಳನ್ನು ವೀಕ್ಷಿಸಿದ ಚುನಾವಣಾ ವೀಕ್ಷಕ ತ್ರಿಪಾಠಿ
ಗೋಕಾಕ: ತಾಲೂಕಿನ ಘಟಪ್ರಭಾ ಪಟ್ಟಣದ ಚೆಕ್‍ಪೋಸ್ಟ್‍ನನ್ನು ಬೆಳಗಾವಿ ಲೋಕಸಭಾ ಮತಕ್ಷೇತ್ರಕ್ಕೆ ಚುನಾವಣಾ ವಿಕ್ಷಕರಾದ ಡಾ. ಚ

ಗೋಕಾಕ 1: ಉಪಚುನಾವಣೆಯ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭಾ ಮತಕ್ಷೇತ್ರಕ್ಕೆ ಚುನಾವಣಾ ವೀಕ್ಷಕರಾದ ಡಾ. ಚಂದ್ರಭೂಷಣ ತ್ರಿಪಾಠಿ (ಭಾ.ಆ.ಸೇ) ಅವರು ಗುರುವಾರದಂದು ಅರಭಾವಿ ಹಾಗೂ ಗೋಕಾಕ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದ ಚೆಕ್‍ಪೋಸ್ಟಗಳ ಹಾಗೂ ಮತಗಟ್ಟೆಗಳನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು. 

ನಂತರ ನಗರದ ಪ್ರವಾಸಿ ಮಂದಿರಲ್ಲಿ ಗೋಕಾಕ ಹಾಗೂ ಅರಭಾವಿ ಮತಕ್ಷೇತ್ರಗಳ ಪೋಲಿಸ ಅಧಿಕಾರಿಗಳ ಸಭೆ ಜರುಗಿಸಿ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳ ಮಾಹಿತಿಯನ್ನು ಪಡೆದರು. 

ಗೋಕಾಕ ವಿಧಾನಸಭೆ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎಸ್.ಬಿ ಗಂಟಿ, ಅರಭಾವಿ ವಿಧಾನಸಭೆ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಪ್ರಸಾದ ರೆಡ್ಡಿ ಹಾಗೂ ಗೋಕಾಕ ತಹಶೀಲದಾರ ನವೀನ ಹೂಲ್ಲೂರ ಮತ್ತು ಮೂಡಲಗಿ ತಾಲೂಕಿನ ತಹಶೀಲದಾರ ಮೋಹನ ಭಸ್ಮೆ ಉಪಸ್ಥಿತರಿದ್ದು ತಮ್ಮ ಮತಕ್ಷೇತ್ರಗಳ ಮಾಹಿತಿಯನ್ನು ಚುನಾವಣಾ ವೀಕ್ಷಕರಿಗೆ ತಿಳಿಸಿದರು.


ಸುದ್ದಿ ಓದಿ