ಶಿಕ್ಷಕಿ ಸರೋಜಿನಿಗೆ ಸನ್ಮಾನ
ಇಂಡಿ: ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿದ ಚಿಕ್ಕಬೇವನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸರೋಜಿನಿ ಮಾವಿನಮರ ಅವರನ್ನು ಇಂಡಿ ಪಟ್ಟಣದ ಬಸವರಾಜೇಂದ್ರ ಸತ್ಸಂಗ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಸ್ವರೂಪಾನಂದ ಸ್ವಾಮಿಗಳು, ಸಂಶೋಧಕರಾದ ಡಾ. ಎಸ್.ಕೆ. ಕೊಪ್ಪ, ಸಂಯುಕ್ತ ಕರ್ನಾಟಕ ಜಿಲ್ಲಾ ವರದಿಗಾರ ವಾಸುದೇವ ಹೆರಕಲ್, ಸತ್ಸಂಗ ಸಮಿತಿ ಅಧ್ಯಕ್ಷ ಪ್ರೊ. ಐ.ಬಿ. ಸುರಪುರ, ಶಸಾಪ ಅಧ್ಯಕ್ಷ ಆರ್.ವಿ. ಪಾಟೀಲ, ಎನ್.ಟಿ. ಸಂಗಾ ಉಪಸ್ಥಿತರಿದ್ದರು.