ಸಿಂಧಗಿ

ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಸಿಂದಗಿ 16: ಪಟ್ಟಣದ ಜೈ ಭಾರತ ಜೈ ಕರ್ನಾಟಕ ಮಾಜಿ ಸೈನಿಕರ ಶಾಂತಿ ಕ್ರಾಂತಿ ಸಂಸ್ಕೃತಿ ಹಾಗೂ ಜನಪರ ಸಮಾಜ ಸೇವಾ ಸಂಘದ ಎಲ್ಲಾ ಮಾಜಿ ಸೈನಿಕರು ಹಾಗೂ ಎಲ್ಲಾ ಪ್ರಗತಿಪರ ಸಂಘಟನೆಗಳ ಸದಸ್ಯರು ಡಾ|. ಬಾಬಾ ಸಾಹೇಬ ಅಂಬೇಡ್ಕರ ವೃತ್ತದಲ್ಲಿ ಪುಲ್ವಾಮಾ ದಾಳಿಯ ಹುತಾತ್ಮ ಯೋಧರಿಗೆ ದೀಪ ಹಚ್ಚುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಮಾಜಿ ಸೈನಿಕ ಸಂಘದ ಅಧ್ಯಕ್ಷ ಶಬ್ಬೀರ ಪಟೇಲ ಬಿರಾದಾರ ಉಪಾಧ್ಯಕ್ಷ ರವಿಂದ್ರ ಬಿರಾದಾರ, ಸಿದ್ಧರಾಮ ಹೊರಕೇರಿ, ಕ್ರೈಂ ವಿಭಾಗದ ಪಿ.ಎಸ್.ಐ. ಸುಮಾ ಗುಡ್ಡೊಡಗಿ ಹಾಗೂ ನಿಂಬೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಅಲ್ಲಾಪೂರ, ಶೈಲಜಾ ಸ್ಥಾವರಮಠ ಹನುಮಂತ್ರಾಯ ಬಿರಾದಾರ ಹಾಗೂ ಸದಸ್ಯರಾದ ಬಸಪ್ಪ ಬಿದರಕುಂದಿ, ಮಲಕಪ್ಪ ಕುರನಳ್ಳಿ, ಜಗದೀಶ ಶಿವಣಗಿ, ಈರಣ್ಣ ತಳವಾರ, ನಿಂಗಪ್ಪ ಕೊರಳ್ಳಿ, ಅಣ್ಣಾರಾಯ ವಾಲೀಕಾರ, ಅಶೋಕ ಕೋರಳ್ಳಿ, ಎ.ಬಿ. ಹುಂಡೇಕಾರ ಇನ್ನಿತರರು ಇದ್ದರು.

ಸುದ್ದಿ ಓದಿ