ಪಪಂ ಕಾರ್ಯಾಲಯದಲ್ಲಿ ಶಾಸಕ ಆನಂದ ಮಾಮನಿಗೆ ಶ್ರದ್ಧಾಂಜಲಿ
ಯರಗಟ್ಟಿ: ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಶಾಸಕ ಆನಂದ ಮಾಮನಿಯವರ ಭಾವಚಿತ್ರಕ್ಕ ಪೂಜೆಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಪ. ಪಂ. ಮುಖ್ಯಾಧಿಕಾರಿ ಬಿ. ಬಿ. ಗೋರೋಶಿ ರಾಜ್ಯ ವಿಧಾನಸಭೆಯ ಮಾನ್ಯ ಉಪ ಸಭಾಧ್ಯಕ್ಷರಾದ ಆನಂದ ಚಂದ್ರಶೇಖರ ಮಾಮನಿ ಅವರು ನಿಧನರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ಅವರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ. ಅವರು ಮಾಡಿದ ಸಾಧನೆ ಅಪಾರವಾದುದು.
ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಕರುಣಿಸಲಿ ಎಂದು ಪ್ರಾಥರ್ಿಸುತ್ತೇವೆ ಎಂದು ಹೇಳಿದರು.
ಎ. ಕೆ. ಜಮಾದಾರ, ಗುಡುಚಾಂದ ದೇವಲ್ಲಿ, ಎಂ. ಡಿ. ಜಮಾದಾರ, ಕಿಶೋರ ಬೆಣ್ಣಿ, ಆನಂದ ಬೆಳವಿ, ಪ್ರಕಾಶಗೌಡ ಪಾಟೀಲ, ಅಡಿವೇಪ್ಪ ಇಟಗೌಡ್ರ, ಮಲಿಕ ಶಿಕ್ಕಲಗಿ, ರಾಜು ಹಿರೇಮಠ ಸೇರಿದಂತೆ ಪಟ್ಟಣ ಪಂಚಾಯತ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು