ಕಾಗವಾಡ

ಎಲ್‌.ಎಸ್ ಗ್ರೂಪ್‌ನಿಂದ ಕರೋನಾ ವಾರಿಯರ್ಸ್‌, ವೀರ, ಆದರ್ಶ ಮಾತೆಯರಿಗೆ ಸನ್ಮಾನ

ಎಲ್‌.ಎಸ್ ಗ್ರೂಪ್‌ನಿಂದ ಕರೋನಾ ವಾರಿಯರ್ಸ್‌, ವೀರ, ಆದರ್ಶ ಮಾತೆಯರಿಗೆ ಸನ್ಮಾನ

ಲೋಕದರ್ಶನ ವರದಿ  

ಕಾಗವಾಡ 24: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇವರ ಅಭಿಮಾನಿಗಳು ಸ್ಥಾಪಿಸಿದ ಎಲ್‌.ಎಸ್‌.ಗ್ರೂಪ್ ವತಿಯಿಂದ ಸಮಾಜದಲ್ಲಿ ಒಳ್ಳೆಯ ಸೇವೆ ಸಲ್ಲಿಸಿದ ಮತ್ತು ಕರೋನಾ ಅವಧಿಯಲ್ಲಿ ತಮ್ಮ ಜೀವದ  ಹಂಗ್ ತೊರೆದು ಸೇವೆ ಸಲ್ಲಿಸಿದ ವೈದ್ಯರು, ಪತ್ರಕರ್ತರು, ದೇಶದ ರಕ್ಷಣೆಯಲ್ಲಿ ಹುತಾತ್ಮರಾದ ಸೈನಿಕರ ಮಾತೆ ವೀರಮಾತ ,ಆದರ್ಶ ಮಾತೆ ಇವರನ್ನು ಕಾಗವಾಡದಲ್ಲಿ ಸನ್ಮಾನಿಸಲಾಯಿತು. 

ಶನಿವಾರ ಸಂಜೆ ಕಾಗವಾಡದ ಮಲ್ಲಿಕಾರ್ಜುನ್ ವಿದ್ಯಾಲಯ ಸಭಾಭವನದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಇವರ ಸುಪುತ್ರ ಚಿದಾನಂದ ಸವದಿ ಹಾಗೂ ಎಪಿಎಂಸಿ ಸಂಚಾಲಕ ರವೀಂದ್ರ ಪೂಜಾರಿ ಇವರ ಹಸ್ತೆಯಿಂದ ಕರೋನಾ ವಾರಿಯರ್ಸ್‌ರಿಯಗೆ ಪ್ರಶಸ್ತಿ ನೀಡಿ ಗೌರವಿಸಿದರು. ಸಬೆಯ ಅಧ್ಯಕ್ಷತೆ ಎಲ್‌ಎಸ್ ಗ್ರೂಪ ಅಧ್ಯಕ್ಷ ಬಸವರಾಜ ಮಗದುಮ ವಹಿಸಿದ್ದರು. 

ದೇಶದ ರಕ್ಷಣೆ ಮಾಡುವಾಗ ಹುತಾತ್ಮರಾದ 7 ಸೈನಿಕರ ತಾಯಿಂದಿರಿಗೆ, ಅದೇ ರೀತಿ ದೇಶದ ರಕ್ಷಣೆಯಲ್ಲಿ ಸೇವೆ ನೀಡುತ್ತಿರುವ 65 ಸೈನಿಕರು, ಪೋಲಿಸ ಸಿಬ್ಬಂದಿಗಳ ಆದರ್ಶ ಮಾತೆಯರಿಗೆ ಸನ್ಮಾನಿಸಲಾಯಿತು. ಅದರೊಂದಿಗೆ ಕರೋನಾ ಕಾಲದಲ್ಲಿ ತಮ್ಮ ಜೀವದ ಹಂಗೂ ತೊರೆದು ಸೇವೆ ನೀಡಿದ ಚಿಕ್ಕೋಡಿ, ಕಾಗವಾಡ, ಅಥಣಿ ತಾಲೂಕಿನ 26 ಪತ್ರಕರ್ತರಿಗೆ ಸನ್ಮಾನಿಸಲಾಯಿತು. 11 ಜನ ವೈದ್ಯರಿಗೆ, 7 ಜನ ಸಮಾಜ ಸೇವಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. 

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ಪಕ್ಷದ ಸಿಪಾಯಿ: 

ಬಿಜೆಪಿ ಪಕ್ಷದ ಯುವ ಮುಖಂಡ ಹಾಗೂ ಮಾಜಿ ಡಿಸಿಎಂ ಅವರ ಪುತ್ರ ಚಿದಾನಂದ ಸವದಿ ಮಾತನಾಡುತ್ತ ಈ ಮೊದಲು ಕೆಲ ರಾಜಕೀಯ ನಮ್ಮ ವಿರೋಧಿಗಳು ಲಕ್ಷ್ಮಣ ಸವದಿ ರಾಜಕೀಯ ಸಮಾಪ್ತವಾಯಿತು ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಈವರೆಗೆ ನೀಡಿರುವ ಬಿಜೆಪಿ ಪಕ್ಷದ ಕಟ್ಟಾ ಅಭಿಮಾನಿ ಹಾಗೂ ಪಕ್ಷದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ನಮ್ಮ ತಂದೆಯವರ ಸೇವೆ ಗಮನದಲ್ಲಿ ತೆಗೆದುಕೊಂಡು ಮನೆಯಿಂದ ಕರೆದುಕೊಂಡು ಹೋಗಿ ರಾಜ್ಯದ ಅತ್ಯುತ್ತಮ ಡಿಸಿಎಂ ಹುದ್ದೆ ನೀಡಿ ರಾಜ್ಯದ ಸೇವೆ ಮಾಡಲು ಅನುಕೂಲ ಮಾಡಿದರು. ಈಗ ಮತ್ತೆ ರಾಜ್ಯಸಭಾ ಸದಸ್ಯ ಮಾಡಿ ಸೇವೆಗೆ ಅನುಕೂಲ ಮಾಡಿದ್ದಾರೆ. ಇಂಥವರ ಹೆಸರಿನಿಂದ ಪ್ರಾರಂಭಿಸಿದ ಎಲ್ .ಎಸ್‌. ಗ್ರೂಪ್ ಕಾರ್ಯಕರ್ತರು ಸಮಾಜದಲ್ಲಿ ಒಳ್ಳೆಯ ಸೇವೆ ನೀಡಿರುವ ಗುರುತಿಸಿ ಅವರನ್ನು ಸನ್ಮಾನಿಸಿ ಹುರಿ ತುಂಬಿಸಿದ್ದೀರಿ ಇದೇ ರೀತಿ ನಿಮ್ಮ ಸೇವೆ ಮುಂದುವರೆಯಲಿ ಎಂದರು. 

ಎಪಿಎಂಸಿ ಸಂಚಾಲಕ ರವೀಂದ್ರ ಪೂಜಾರಿ ಮಾತನಾಡಿ ನನ್ನ ಜೀವನದಲ್ಲಿ ಕಂಡಿರುವ ಅತ್ಯುತ್ತಮ ರಾಜಕೀಯ ವ್ಯಕ್ತಿ ಎಂದು ಲಕ್ಷ್ಮಣ ಸವದಿ ಇವರನ್ನು ಕಂಡಿದ್ದೇನೆ. ನನ್ನ ತರಹ ಯುವಕರು ಅವರ ಹೆಸರಿನಲ್ಲಿ ಸಂಘಟನೆ ಸ್ಥಾಪಿಸಿ ಆದರ್ಶ ಕಾರ್ಯ ಮಾಡುತ್ತಿದ್ದಾರೆ. ಇದು ಒಂದು ಸ್ಲಿಯಾಗನೀಯ ಕಾರ್ಯ ಎಂದರು. 

ಸಮಾರಂಭ ಯಶಸ್ವಿ ಗೊಳಿಸಿದ ಎಲ.ಎಸ ಗ್ರೂಪ್ ಸಂಘಟನೆ ಅಧ್ಯಕ್ಷ ಬಸವರಾಜ ಮಗದುಮ್, ಉಪಾಧ್ಯಕ್ಷ ಸಂಜಯ್ ಕರವ, ಸಂಚಾಲಕರಾದ ಮಹಾವೀರ್ ಪಾಟೀಲ್, ಮಹೇಶಕುಮಾರ್ ಮಡಿವಾಳ, ಸಂಜೆಯ ಫಿರ್ಗನವರ್, ರಾಜು ಮಗದುಮ್, ಸಚಿನ್ ಪಾಟೀಲ್, ಸೇರಿದಂತೆ ಇತರ ಯುವಕರು ವಿಶೇಷ ಶ್ರಮಿಸಿದರು. 

ಎಲ್‌ಎಸ್  ಗ್ರೂಪ್ ವತಿಯಿಂದ ಹಮ್ಮಿಕೊಂಡ ಆದರ್ಶ ಮಾತೆ, ವೀರಮಾತೆ ಇವರ ಸನ್ಮಾನ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ. 


ಸುದ್ದಿ ಓದಿ