ರಾಣೆಬೆನ್ನೂರ

ಅತಿವೃಷ್ಟಿಯಿಂದ ಅಪಾರ ಹಾನಿ: ಪರಿಹಾರಕ್ಕೆ ಮನವಿ

ಅತಿವೃಷ್ಟಿಯಿಂದ ಅಪಾರ ಹಾನಿ: ಪರಿಹಾರಕ್ಕೆ ಮನವಿ

ರಾಣೆಬೆನ್ನೂರು 15:  ನಗರವೂ ಸೇರಿದಂತೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಇತ್ತೀಚೆಗೆ  ಸುರಿದ ಭಾರಿ ಮಳೆಯಿಂದಾಗಿ, ರೈತರು ಜನಸಾಮಾನ್ಯರು ಅಪಾರ ನಷ್ಟವನ್ನು ಕಂಡಿದ್ದಾರೆ ಕೂಡಲೇ ಸರಿಯಾಗಿ ಪರೀಶೀಲನೆ ಮಾಡಿ ವೈಜ್ಞಾನಿಕ ರೀತಿಯ ಪರಿಹಾರ ನೀಡಲು ಮುಂದಾಗಬೇಕು ಎಂದು ಮಂಜುನಾಥ್ ಗೌಡ ಶಿವಣ್ಣನವರ  ಅಭಿಮಾನಿ ಬಳಗದ ಕಾರ್ಯಕರ್ತರು, ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಗುರುವಾರ ಮುಂಜಾನೆ ತಹ ಶಿಲ್ ಲ್ದಾರ್ ಕಚೇರಿ ಆವರಣದಲ್ಲಿ ಜಮಾಯಿಸಿದ ಬಳಗದ ಕಾರ್ಯಕರ್ತರು, ಮನವಿ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಕರಿಯಪ್ಪ ಶಿ ಡಗನಾಳ, ಅವರು  ಮಳೆಯಿಂದಾಗಿ, ಬೆಳೆದ ಬೆಳೆ ಸಂಪೂರ್ಣ ಹಾಳಾಗಿದೆ, ಮನೆಗಳು ಬಿದ್ದು ಹಾನಿ ಸಂಭವಿಸಿದೆ, ರಸ್ತೆಗಳು ಹಾನಿಗೊಂಡಿವೆ, ಮೆಕ್ಕೆಜೋಳ, ಜೋಳ, ಕಬ್ಬು, ಬಾಳೆ, ರಾಗಿ, ಭತ್ತ, ತೊಗರಿ, ಹೆಸರು, ಸೊಪ್ಪು, ತರಕಾರಿ ಬೆಳೆಗಳು  ಮತ್ತು ಉಳ್ಳಾಗಡ್ಡಿ, ಬೂಳ್ಳೊಳ್ಳಿ, ನೀರುಪಾಲಾಗಿದೆ, ಕೂಡಲೇ ಸರಕಾರ, ವೈಜ್ಞಾನಿಕವಾಗಿ  ಪರಿಹಾರ ನೀಡಬೇಕು ಎಂದು ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ. 

ಇದೇ ಸಂದರ್ಭದಲ್ಲಿ, ತಾಲೂಕ ಆಡಳಿತದ ಮೂಲಕ, ಸರಕಾರಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಮತ್ತು ಕೃಷಿ ಸಚಿವರಿಗೆ   ತಮ್ಮ ಮನವಿಯನ್ನು ಸಲ್ಲಿಸಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ, ಮಂಜುನಾಥಗೌಡ ಶಿವಣ್ಣನವರ್, ಶಿವನಗೌಡ ಕಡೂರು, ಪ್ರಭು ತೆಗ್ಗಿನ್, ಮಾಲತೇಶ ಹಲಗೇರಿ, ಜಯರಾಮ್, ಯೋಗೀಶ್ ದೊಡ್ಡಗೌಡ್ರ, ರೇವಣಪ್ಪ ಗೌಡ ಶಿವಣ್ಣನವರ, ಸುಧಾ ಪಾಟೀಲ್, ಪ್ರಶಾಂತ್, ಮನು ಗೌಡ ಶಿವಣ್ಣನವರ್, ಮಂಜುನಾಥ ಬುರಡಿಕಟ್ಟಿ ಸೇರಿದಂತೆ ಮತ್ತಿತರೆ  ಕಾರ್ಯಕರ್ತರು, ಅಭಿಮಾನಿ ಬಳಗದ ಸದಸ್ಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ