ಸಾವಯುವ ಕೃಷಿಯೊಂದಿಗೆ ಮಣ್ಣು ರಕ್ಷಣೆ ಕುರಿತು ತರಬೇತಿ
ರಾಣಿಬೆನ್ನೂರ 16: ಇಡಿ ಜೀವಿ ಜಗತ್ತು ಇಂದು ಒಂದು ಶಕ್ತಿಯ ಮೇಲೆ ನಿಂತಿದೆ. ಅದೇ ಮಣ್ಣು. ಆ ಮಣ್ಣಲ್ಲಿ ಜೀವಿಗಳಿರುವುದರಿಂದ ಅದು ಬರಿಯ ಮಣ್ಣಲ್ಲ. ಸಜೀವಿ ಮಣ್ಣು. ಜೀವಂತಿಕೆಯ ಸಂಕೇತ. ಯಾವುದೇ ಮಣ್ಣು ಬೆಳೆಗಳ ಉತ್ಪಾದನೆ ಮಾಡಬೇಕೆಂದಲ್ಲಿ, ಆ ಮಣ್ಣಲ್ಲಿ ಮೂರು ಅಂಶಗಳಿರಬೇಕು. ಅದುವೇ ಸಾವಯವ ಅಂಶ ಹಿತೇವಾಂಶಹೀಜೀವಾಂಶ ಎಂದು ಸಹಾಯಕ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಹೇಳಿದರು.
ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಅಜೀಮ್ ಪ್ರೇಮ್ಜಿ ಫೌಂಡೇಷನ್ ಬೆಂಗಳೂರು ಇವರ ಸಹಯೋಗದೊಂದಿಗೆ ಸಾವಯುವ ಕೃಷಿಯೊಂದಿಗೆ ಮಣ್ಣು ರಕ್ಷಣೆ ಕುರಿತು ನಡೆದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ತಮ್ಮ ಹೊಲ-ತೋಟಗಳಲ್ಲಿನ ಮಣ್ಣುಗಳಲ್ಲಿ ಈ ಮೂರೂ ಅಂಶಗಳು ಇವೆಯೇ ಎಂಬುದನ್ನು ಅಗಿಂದಾಗೆ ಪರೀಶೀಲಿಸುತ್ತಿರಬೇಕು. ಇದು ರೈತರೇ ಸ್ವಯಂ ತಾವೇ ತಮ್ಮ ಮಣ್ಣುಗಳನ್ನು ಪರೀಶೀಲಿಸುವ ವಿಧಾನ. ಮಣ್ಣನ್ನು ಪರೀಶೀಲಿಸುವುದೂ ಸಹ ಒಂದು ಕೌಶಲ್ಯವೇ ಎಂದರು.
ಹಿರಿಯ ವಿಜ್ಞಾನಿ ಡಾ.ಗುರುಪ್ರಸಾದ ಆಧ್ಯಕ್ಷತೆ ವಹಿಸಿದ್ದರು. ಜಿ.ಎಸ್. ರಾಮಚಂದ್ರ, ವನಸಿರಿ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ನಿರ್ದೇಶಕ ಎಸ್.ಡಿ. ಬಳಿಗಾರ, ಪಿ. ಶ್ರೀನಿವಾಸ್, ವನಸಿರಿ ಸಂಸ್ಥೆಯ ಸಿಬ್ಬಂದಿಗಳು ಮತ್ತು 70 ಸಾವಯುವ ಕೃಷಿಕರು ಬಾಗವಹಿಸಿದ್ದರು.