ಎನ್.ಡಿ.ಆರ್.ಎಫ್ ಅಧಿಕಾರಿಗಳಿಂದ ಮಹಾಪೂರ ಎದುರಿಸಲು ತರಬೇತಿ
ಲೋಕದರ್ಶನ ವರದಿ
ಕಾಗವಾಡ 09: ಕೇಂದ್ರದ ಎನ್.ಡಿ.ಆರ್.ಎಫ್ 10ನೆ ಬಟಾಲಿನ್ ತಂಡದ ಅಧಿಕಾರಿಗಳಿಂದ ಕಾಗವಾಡ ತಾಲೂಕಿನ ಕೃಷ್ಣ ಕಿತ್ತೂರ್ ಮತ್ತು ಉಗಾರದಲ್ಲಿ ಎನ್.ಎಸ್.ಎಸ್, ಆಶಾ, ಅಂಗನವಾಡಿ ಕಾರ್ಯಕರ್ತರಿಗೆ, ಉಗಾರ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಹಾಪೂರ ನೀರು ಎದುರಿಸಲು ತರಬೇತಿ ನೀಡಿದರು.
ಶನಿವಾರ ರಂದು ಎನ್.ಡಿ.ಆರ್.ಎಫ್ 10ನೆ ಬಟಾಲಿನ್ ತಂಡದ ಕಮಾಂಡರ್ ಕಮಲೇಶ ಸಿಂಹ ಇವರ ನೇತೃತ್ವದಲ್ಲಿ 22 ಸೈನಿಕರೊಂದಿಗೆ ಹಾಗೂ ಅಧಿಕಾರಿಗಳಿಂದ ಕೃಷ್ಣಾ ನದಿಗೆ ಮಹಾಪೂರ ನೀರು ಬಂದಾಗ ಅದನ್ನು ಎದುರಿಸಲು ಎಲ್ಲ ರೀತಿಯ ತರಬೇತಿ ನೀಡಿದರು.
ಕಮಾಂಡರ್ ಕಮಲೇಶ ಸಿಂಹ ಮಾತನಾಡುವಾಗ ನದಿಗೆ ಮಹಾಪೂರ ಬಂದರು ಅಥವಾ ಯಾವುದೇ ಸಮಸ್ಯೆ ಬಂದರೆ ಹೆದರಬಾರದು ಧೈರ್ಯದಿಂದ ಅದನ್ನು ಎದುರಿಸಬೇಕು ಎಂದು ಹೇಳಿ ಮಹಾಪೂರ ನೀರಿನಲ್ಲಿ ಯಾವ ರೀತಿ ತಮ್ಮನ್ನು ತಾವು ಸೌರಕ್ಷಣೆ ಮಾಡಬಹುದು ಈ ಬಗ್ಗೆ ತರಬೇತಿ ನೀಡುವ ಮುಖಾಂತರ ಎಲ್ಲರಿಗೆ ಧೈತುಂರ್ಬಿದರು.
ಕಾಗವಾಡ ತಹಸಿಲ್ದಾರ್ ರಾಜೇಶ್ ಬುರ್ಲಿ ಇವರು ಮಾತನಾಡುವಾಗ 2005 ರಿಂದ ಈವರೆಗೆ ಎನ್ ಡಿ ಆರ್ ಎಫ್ ತಂಡದ ಸಿಬ್ಬಂದಿಗಳು ಬಂದು ಎಲ್ಲ ರೀತಿಯ ಸಂರಕ್ಷಣ ನೀಡುತ್ತೆದಾರೆ. ಎನ್.ಡಿ .ಆರ್.ಎಫ್ ತಂಡ ಬಂದು ಕೂಡಲೇ ನಮಗೆ ಆದರ್ಶಕ್ತಿ ಬರುತ್ತಿದೆ. ಕಳೆದ ಎರಡು ದಿನ ತರಬೇತಿ ನೀಡುತ್ತಿದಾರೆ. 22 ಸೈನಿಕರ ತಂಡ ಇದೆ ತಾಲೂಕಿನಲ್ಲಿ ಇರುತದೆ ಎಂದು ಹೇಳಿದರು.
ಶುಕ್ರವಾರ ರಂದು ಕೃಷ್ಣ-ಕಿತ್ತೂರ ಗ್ರಾಮದಲ್ಲಿ ಸಂಪೂರ್ಣ ದಿನ ಉಳಿದು ನದಿ ತೀರದ ಜನರಿಗೆ ಎನ್.ಡಿ.ಆರ್.ಎಫ್ ತಂಡದ ತರಬೇತಿಗಾರ ಅಧಿಕಾರಿ ಬಿ.ಶಿವಣ್ಣಾ ಹಾಗು ಸಿಬ್ಬಂದಿಗಳು ತರಬೇತಿ ನೀಡಿದರು.
ಶನಿವಾರರಂದು ಉಗಾರ ಸಕ್ಕರೆ ಕಾರ್ಖಾನಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಆರ್.ಮುಂಜೆ, ಸಿ.ಡಿ.ಪಿ.ಓ ಸಂಜಯ್‌ಕುಮಾರ್ ಸದಲ್ಗಗೆ, ಉಗಾರ್ ಪುರಸಭೆ ಮುಖ್ಯಅಧಿಕಾರಿ ಸುನಿಲ್ ಬಬಲಾದಿ, ಎಂ.ಆರ್.ಮೋಟಗಿ ಗುರುಗಳು, ಎಲ್ಲ ಚುನಾಯಿತ ಸದ್ಯಸೆರು, ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.